More

    ‘ಕ್ಯಾಷ್‌ಬ್ಯಾಕ್‌’ ಸಿಕ್ಕಿತೆಂದು ಖುಷಿಪಟ್ರೆ ಹೀಗೂ ಆಗ್ಬೋದು ನೋಡಿ: 3 ಲಕ್ಷ ರೂ. ಕಳೆದುಕೊಂಡ ರಾಯಚೂರಿನ ವಿದ್ಯಾರ್ಥಿ!

    ರಾಯಚೂರು: ಈಗಂತೂ ವಿವಿಧ ರೀತಿಯಲ್ಲಿ ನಡೆಯುತ್ತಿರುವ ಸೈಬರ್‌ ವಂಚನೆಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿ ಒಂದು ಕ್ಯಾಷ್‌ಬ್ಯಾಕ್ ಆಮಿಷ. ಒಂದೆರಡು ಬಾರಿ ಮಾಡುವ ವಹಿವಾಟಿಗೆ ಸ್ವಲ್ಪ ಸ್ವಲ್ಪ ಕ್ಯಾಷ್‌ಬ್ಯಾಕ್‌ ಆಫರ್‌ ಕೊಟ್ಟು, ಅದರ ಚಟ ಹತ್ತಿಸಿ, ಲಕ್ಷ ಲಕ್ಷ ರೂ‍ಪಾಯಿ ಪಂಗನಾಮ ಹಾಕುವ ಹಲವಾರು ಮೋಸದ ಕಂಪೆನಿಗಳು ಹುಟ್ಟಿಕೊಂಡಿವೆ ಹುಷಾರ್‌!

    ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ವಿದ್ಯಾರ್ಥಿಯೊಬ್ಬ ಕ್ಯಾಷ್ ಬ್ಯಾಕ್ ಆಮಿಷಕ್ಕೆ ಒಳಗಾಗಿ ಮೂರು ಲಕ್ಷ ಹಣ ಕಳೆದುಕೊಂಡು ಈಗ ಪೊಲೀಸ್‌ ಠಾಣೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಶ್ರೀಧರ್ ಪಾಟೀಲ್ ಎಂಬ ವಿದ್ಯಾರ್ಥಿ ಮೋಸ ಹೋಗಿದ್ದಾನೆ. ಆಗಿದ್ದೇನೆಂದರೆ ಈತ ಪಾರ್ಟ್ ಟೈಂ ಕೆಲಸಕ್ಕಾಗಿ ಹುಡುಕುತ್ತಿದ್ದ. ಆಗ ಸಿಕ್ಕ ಒಂದು ಲಿಂಕ್‌ ಓಪನ್‌ ಮಾಡಿದಾಗ ಪ್ರಾಡಕ್ಟ್ ಖರೀದಿಗೆ ಆಫರ್ ಬಂದಿದೆ. 88 ಸಾವಿರ, 69 ಸಾವಿರಕ್ಕೆ 2 ವಸ್ತುಗಳನ್ನು ಖರೀದಿಸಿದ್ದಾನೆ. ಆಗಲೂ ಕ್ಯಾಷ್‌ಬ್ಯಾಕ್ ಸಿಕ್ಕಿದೆ. ಇದರಿಂದ ಮತ್ತಷ್ಟು ಉತ್ತೇಜನಗೊಂಡ ಶ್ರೀಧರ್‌ ಸ್ನೇಹಿತರ ಬಳಿ ಸಾಲ ಮಾಡಿ 3,78,600 ರೂ. ಹಾಕಿ ತನಗೆ ಬೇಕಾದ ವಸ್ತು ಖರೀದಿ ಮಾಡಿದ್ದಾನೆ. ಆಗ ಕ್ಯಾಷ್‌ಬ್ಯಾಕ್‌ ಬರಲಿಲ್ಲ. ಬದಲಿಗೆ ಇನ್ನಷ್ಟು ದುಡ್ಡು ಹಾಕಿ, ಮತ್ತಷ್ಟು ವಸ್ತು ಖರೀದಿಸಿ, ಕ್ಯಾಷ್‌ಬ್ಯಾಕ‌ ಸಿಗುತ್ತದೆ ಎಂಬ ಮೆಸೇಜ್‌ ಬಂದಿದೆ. ಶ್ರೀಧರ್‌ ಬಳಿ ಆ ಕ್ಷಣದಲ್ಲಿ ಹಣವಿಲ್ಲದ್ದರಿಂದ ಮತ್ತೆ ಪ್ರಾಡಕ್ಟ್‌ ಖರೀದಿ ಮಾಡುವ ಉಸಾಬರಿಗೆ ಹೋಗಲಿಲ್ಲ. ಆದರೆ ದುಡ್ಡು ವಾಪಸ್‌ ಬರಲಿಲ್ಲ. ಆಗಲೇ ಆತನಿಗೆ ಗೊತ್ತಾದದ್ದು ನಾನು ಮೋಸ ಹೋಗಿದ್ದೇನೆ ಎಂದು!

    ಸದ್ಯ ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ‘ನೀನು ಹೆಚ್ಚು ದಿನ ಬದುಕಲ್ಲ…’ ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ!

    ‘ನನ್ನ ಆಸ್ತಿ ಇದು… ಯಾರಿಗಾದ್ರೂ ಕೊಡ್ತೇನೆ’ ಎಂದು ಗಂಡ ಹೇಳಿದ್ರೆ ಪತ್ನಿ ಏನೂ ಮಾಡಲು ಆಗುವುದಿಲ್ಲ… ನಿಮಗಿರೋದು ಒಂದೇ ದಾರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts