ಡಾ. ಬನ್ನಂಜೆ ಗೋವಿಂದಾಚಾರ್ಯರ ಪುತ್ರ ವಿಜಯಭೂಷಣ ನಿಧನ

bannanje
Published on

ಮಣಿಪಾಲ: ಹಿರಿಯ ವಿದ್ವಾಂಸ ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯರ ಮಗ ವಿಜಯಭೂಷಣ ಆಚಾರ್ಯ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ಇವರಿಗೆ 56 ವರ್ಷ ವಯಸ್ಸಾಗಿತ್ತು.

ಕೆಲ ಸಮಯಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಹೇಳಲಾಗಿದೆ.

ಇಂದು ಬೆಳಗ್ಗೆ ಅಂಬಲಪಾಡಿಯ ಅವರ ಸ್ವಗೃಗಹದಲ್ಲಿ ಅಂತಿಮದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನಂತರ ಬೀಡಿನಗುಡ್ಡೆಯಲ್ಲಿ ಅಂತ್ಯಕ್ರಿಯೆ ನಡೆದಿದೆ.

ವಿಜಯಭೂಷಣ ಅವರು ತಂದೆ ಬನ್ನಂಜೆ ಗೋವಿಂದಾಚಾರ್ (86) ಸೇರಿದಂತೆ ಸಹೋದರಿ ಮತ್ತು ಸಹೋದರ ಅವರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net