VIDEO: ರಕ್ತದಿಂದ ಬಿಪಿನ್‌ ರಾವತ್‌ರ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದ ಬಾಗಲಕೋಟೆ ಶಿಕ್ಷಕ

1200513
Published on

ಬಾಗಲಕೋಟೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ನಂತರ ಅವರಿಗೆ ಹಲವರು ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಇದೀಗ ಬಾಗಲಕೋಟೆ ಹಿನ್ನೆಲೆ ಜಮಖಂಡಿ ಪಟ್ಟಣದ ಶಿಕ್ಷಕ ಕಲಾವಿದರೊಬ್ಬರು ರಕ್ತದಲ್ಲಿ ರಾವತ್‌ ಅವರ ಭಾವಚಿತ್ರ ಬಿಡಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ರಬಕವಿ-ಬನಹಟ್ಟಿ ತಾಲೂಕಿನ ಹೊಸೂರು ಆರ್​​ಎಮ್​ಎಸ್​ಎ ಹೈಸ್ಕೂಲ್​ನ ಚಿತ್ರಕಲಾ ಶಿಕ್ಷಕರಾಗಿ‌ ಕೆಲಸ ಮಾಡುತ್ತಿರುವ ಸಂಗಮೇಶ ಬಗಲಿ ರಕ್ತದಲ್ಲಿ ಈ ಚಿತ್ರವನ್ನು ಬಿಡಿಸಿದ್ದಾರೆ. ಇದಾಗಲೇ ಇವರು ತಮ್ಮ ರಕ್ತದಿಂದ ಗಾಂಧಿ, ಅಂಬೇಡ್ಕರ್, ಅಬ್ದುಲ್ ‌ಕಲಾಂ, ಇಂದಿರಾ ಗಾಂಧಿ ಸೇರಿದಂತೆ ಪ್ರಮುಖ ನಾಯಕರ ಭಾವಚಿತ್ರಗಳನ್ನು ಬಿಡಿಸಿದ್ದಾರೆ.

ಮಹಾನಾಯಕರ ಜತೆಗೆ ಪ್ರಸಕ್ತ ನಡೆಯುವ ವಿದ್ಯಮಾನಗಳನ್ನು ಇಟ್ಟುಕೊಂಡು‌ ಚಿತ್ರಗಳನ್ನು‌ ಬಿಡಿಸುವುದು ಇವರ ಹವ್ಯಾಸ. ಇದೀಗ ಇವರು ಬಿಡಿಸಿರುವ ರಾವತ್‌ ಅವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net