VIDEO: ಸಾರಾಯಿ ಅಂಗಡಿ ಮುಚ್ಚದಿದ್ರೆ ಸಾಯ್ತೇನೆಂದ ಕುಡುಕ: ಕಂಠಪೂರ್ತಿ ಎಣ್ಣೆ ಹಾಕ್ಕೊಂಡೇ ಡಿಮಾಂಡ್​!

bagalkote
Published on

ಬಾಗಲಕೋಟೆ: ಸಾರಾಯಿ ಬಂದ್ ಮಾಡಬೇಕೆಂದು ಪಂಚಾಯಿತಿ ಕಟ್ಟಡ ಏರಿದ ಕುಡುಕ ಹೈಡ್ರಾಮಾ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಕನೂರಿನಲ್ಲಿ ನಡೆದಿದೆ.

ಸಾರಾಯಿ ಅಂಗಡಿ ಬಂದ್ ಮಾಡಿಸದಿದ್ದರೆ ಪಂಚಾತಿಯಲ್ಲೇ ನೇಣು ಹಾಕಿಕೊಂಡು ಸಾಯ್ತಿನಿ ಎಂದು ಕಾಕಪ್ಪ ಮಾದರ ಎಂಬ ವ್ಯಕ್ತಿ ಕಟ್ಟಡ ಏರಿ ಕುಳಿತಿದಿದ್ದ. ಅಚ್ಚರಿಯ ವಿಷಯ ಎಂದರೆ ಕಂಠಪೂರ್ತಿ ಕುಡಿದುಕೊಂಡೇ ಈತ ಕಟ್ಟಡ ಏರಿ ಸಾರಾಯಿ ಅಂಗಡಿ ಬಂದ್​ ಮಾಡಲು ಆಗ್ರಹಿಸುತ್ತಿದ್ದ!

ನಾ ಮನೆ ಕೇಳಿಲ್ಲ, ಹೊಲ‌ ಕೇಳಿಲ್ಲ ಸಾರಾಯಿ‌ ಮಾರಾಟ ಬಂದ್ ಮಾಡಿಸಿ ಎಂದು ಕೇಳುತ್ತಿದ್ದೇನೆ, ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ಬಂದ್ ಮಾಡಿಸಿ, ನೀವು ಅಂಗಡಿ ಬಂದ್​ ಮಾಡಿಸಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಧಮ್ಕಿ ಹಾಕುತ್ತಿದ್ದ.

ಪಂಚಾಯಿತಿ ಕಟ್ಟಡದ ಮೇಲೆ ಕೂತು ಅರ್ಧ ಗಂಟೆಗೂ ಅಧಿಕ ಕಾಲ ಕೂಗಾಡುತ್ತಿದ್ದ ಈತನನ್ನು ಕೆಳಕ್ಕೆ ಇಳಿಸುವುದೇ ಸವಾಲಾಗಿ ಹೋಗಿತ್ತು. ಕೊನೆಗೆ ಗ್ರಾಮದ ಹಿರಿಯರು ಬಂದು ಆತನ ಮನವೊಲಿಕೆ ಮಾಡಿದ ಬಳಿಕ ವ್ಯಕ್ತಿ ಕೆಳಕ್ಕಿಳಿದ. (ದಿಗ್ವಿಜಯ ನ್ಯೂಸ್​)

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net