ಅಂತ್ಯಸಂಸ್ಕಾರ ಮಾಡಿದವರಿಗೂ ಸೋಂಕು, ಸಾಂತ್ವನ ಹೇಳಿದವರಿಗೂ ಕರೊನಾ: 18 ಮಂದಿ ಸ್ಥಿತಿ ಅಯೋಮಯ

death
ಸಾಂದರ್ಭಿಕ ಚಿತ್ರ
Published on

ಬಾಗಲಕೋಟೆ: ಅಂತ್ಯಸಂಸ್ಕಾರಕ್ಕೆ ಹೋದವರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹೋದವರಿಗೂ ಕರೊನಾ ಸೋಂಕು ಬಾಧಿಸುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ರೇಲ್ವೆ ಸ್ಟೇಷನ್ ಗ್ರಾಮದಲ್ಲಿ ನಡೆದಿದೆ.

ಒಂದೇ ಮನೆಯ ಹಾಗೂ ಸಂಬಂಧಿಕರು ಸೇರಿ ಒಟ್ಟು 18 ಜನರಿಗೆ ಸೋಂಕು ತಗುಲಿದೆ. ಇವರ ಪೈಕಿ 10 ಮಂದಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರೆ, ಎಂಟು ಮಂದಿ ಸಾಂತ್ವನ ಹೇಳಲು ಹೋಗಿದ್ದರು ಎಂದು ತಿಳಿದುಬಂದಿದೆ.

ಶಂಕ್ರಪ್ಪ ಗೌಡರ(48) ಮೇ 5 ರಂದು ಮೃತಪಟ್ಟಿದ್ದರು. ಕೋವಿಡ್ ಶಂಕೆ ಹಿನ್ನೆಲೆಯಲ್ಲಿ ಕೋವಿಡ್ ನಿಯಮಾವಳಿ ಪ್ರಕಾರವೇ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇವರ ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದರು. ನಂತರ ಇದರ ಕುಟುಂಬದ ಕೆಲ ಸದಸ್ಯರು ಸಾಂತ್ವನ ಹೇಳಲು ಮನೆಗೆ ಹೋಗಿದ್ದರು.

ಕೆಲ ದಿನಗಳ ಬಳಿಕ ಆರೋಗ್ಯ ಇಲಾಖೆ ತಪಾಸಣೆಗೆ ಹೋಗಿದೆ. ಆಗ ತಪಾಸಣೆ ಮಾಡಿದಾಗ ಎಲ್ಲಾ 18 ಮಂದಿಗೆ ಸೋಂಕು ತಗುಲಿರುವುದು ತಿಳಿದಿದೆ. ಸದ್ಯ ಮೃತನ ಕುಟುಂಬಸ್ಥರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಈ ಗ್ರಾಮಕ್ಕೆ ಕೆಲ ವಲಸಿಗರು ಬಂದಿದ್ದು, ಅವರಿಂದಲೇ ಕೋವಿಡ್ ಹರಡಿರುವ ಶಂಕೆ ವ್ಯಕ್ತಪಡಿಸುತ್ತಿರುತ್ತಿದ್ದಾರೆ ಗ್ರಾಮಸ್ಥರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net