More

    ಸೋಂಕಿನಿಂದ ಗುಣಮುಖರಾದ ಖುಷಿಯಲ್ಲಿದ್ದ ಯುವ ಅಧಿಕಾರಿಯನ್ನು ಏಕಾಏಕಿ ಬಲಿ ಪಡೆದ ಕರೊನಾ!

    ಬೀದರ್‌: ಬೀದರ್‌ನ ಭೂ ಕಂದಾಯ ವಿಭಾಗದ ಸಹಾಯಕ ನಿರ್ದೇಶಕ, ಯುವ ಅಧಿಕಾರಿ ರವಿಕುಮಾರ (32) ಕರೊನಾಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲಿನ ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪೂರ್ಣ ಗುಣಮುಖರಾಗಿ ಡಿಸ್ಚಾಜ್೯ ಹಂತಕ್ಕೆ ಬಂದ ವೇಳೆ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿ ಸಾವು ಸಂಭವಿಸಿದೆ.

    ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಡಿಸಿ ಕಚೇರಿಯ ಭೂ ಕಂದಾಯ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಮೈಸೂರಿನವರು.

    ಕರೊನಾದಿಂದ ಗುಣಮುಖರಾಗಿದ್ದ ಹಿನ್ನೆಲೆಯಲ್ಲಿ ಡಿಸ್ಚಾಜ್೯ ಆಗುವ ಹಂತದಲ್ಲಿದ್ದರು. ಇವರು ಚೇತರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಕ್ಸಿಜನ್ ಸಹ ತೆಗೆಯಲಾಗಿತ್ತು. ಆದರೆ ಇದ್ದಕ್ಕಿದ್ದಂತೆಯೇ ಮೆದುಳಿನ ರಕ್ತ ಕ್ಲಾಟ್ ( ಬ್ರೇನ್ ಬ್ಲಡ್ ಕ್ಲಾಟ್) ಆಗಿದೆ. ಕೋಮಾಗೆ ಜಾರಿ ರಾತ್ರಿ ಕೊನೆಯುಸಿರೆಳೆದರು. ಇವರ ಸೂಕ್ತ ಚಿಕಿತ್ಸೆಗಾಗಿ ಡಿಸಿ ರಾಮಚಂದ್ರನ್, ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿಯೂ ಆದ ಹೆಚ್ಚುವರಿ ಡಿಸಿ ರುದ್ರೇಶ ಘಾಳಿ ಮಾಡಿದ ಇನ್ನಿಲ್ಲದ ಪ್ರಯತ್ನ ಫಲ ನೀಡಲಿಲ್ಲ.

    ಆರೋಗ್ಯ ತೀವ್ರ‌ ನಾಜೂಕಾದ ‌ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕಳಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಹೈದರಾಬಾದ್‌ವರೆಗೆ ಹೋಗುವಷ್ಟರಲ್ಲಿ ಸ್ಥಿತಿ ಬಹಳ ಗಂಭೀರವಾಗಿದೆ. ಹೀಗಾಗಿ ಕೂಡಲೇ ಚಿಕಿತ್ಸೆಗಾಗಿ ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಷ್ಟೊತ್ತಿಗೆ ಕೋವಿಡ್ ಇವರಿಗೆ ಬಲಿ ಪಡೆದಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
    ಇವರಿಗೆ ಬ್ಲ್ಯಾಕ್ ಫಂಗಸ್ ಆಗಿತ್ತಾ ಎಂಬ ಶಂಕೆ ಮೂಡಿತ್ತು. ಆದರೆ ಸ್ಕ್ಯಾನಿಂಗ್ ವೇಳೆ ಬ್ಲ್ಯಾಕ್ ಫಂಗಸ್ ಆಗಿಲ್ಲ ಎನ್ನಲಾಗಿದೆ. ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇವರಿಗೆ ಪತ್ನಿ, ಮಗ, ಮಗಳು ಇದ್ದಾರೆ.

    ಸೋಂಕಿತ ಬಾಲಕನಿಗೆ ಮರವೇ ಐಸೋಲೇಷನ್‌ ಸೆಂಟರ್‌! ಮನೆಯಲ್ಲಿಲ್ಲ ಜಾಗ, 11 ದಿನಗಳಿಂದ ಇಲ್ಲಿಯೇ ವಾಸ

    ಪ್ರಧಾನಿ ವಿರುದ್ಧದ ಪೋಸ್ಟರ್‌ನ ಕಿಂಗ್‌ಪಿನ್‌ ತನಿಖೆ ಬೆನ್ನಲ್ಲೇ ‘ನನ್ನನ್ನೂ ಬಂಧಿಸಿ’ ಎಂದ ರಾಹುಲ್‌ ಗಾಂಧಿ!

    ಸಿವಿಲ್‌ ಇಂಜಿನಿಯರಿಂಗ್‌ ಪದವೀಧರರಾ? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts