VIDEO: ಅಪ್ಪು ಕನಸಿನ ‘ಗಂಧದ ಗುಡಿ’ ಟೀಸರ್‌ ಬಿಡುಗಡೆ: ನೆಚ್ಚಿನ ನಟನ ನೋಡಿ ಕಣ್ಣೀರಾಗುತ್ತಿರುವ ಅಭಿಮಾನಿಗಳು

gandhadagudi
Published on

ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಅವರ ಹುಟ್ಟುಹಬ್ಬವಿದು (ಡಿ.6) ಇಂದೇ ನಟ ಪುನೀತ್ ರಾಜ್‍ಕುಮಾರ್‌ ಅವರ ಕನಸಿನ ಗಂಧದ ಗುಡಿ‌ ಸಾಕ್ಷ್ಯಚಿತ್ರದ ಟೈಟಲ್​ ಟೀಸರ್ ಬಿಡುಗಡೆಯಾಗಿದೆ.

ನವೆಂಬರ್‌ 1ರಂದು ಇದು ಬಿಡುಗಡೆಯಾಗಬೇಕಿತ್ತು. ಆದರೆ ಇದಕ್ಕೂ ಮುನ್ನವೇ ಅಪ್ಪು ಎಲ್ಲರನ್ನೂ ಅಗಲಿ ಕಣ್ಮರೆಯಾಗಿದ್ದ ಹಿನ್ನೆಲೆಯಲ್ಲಿ ಟೀಸರ್‌ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಅದು ಬಿಡುಗಡೆಯಾಗಿದೆ. ಇದು 1 ನಿಮಿಷ 20 ಸೆಕೆಂಡ್‌ ಇದೆ.

ಕನ್ನಡ ನಾಡಿನ ಪ್ರಕೃತಿ ಸೌಂದರ್ಯ ಮತ್ತು ವನ್ಯಜೀವಿಗಳ ಕುರಿತ ಸಾಕ್ಷ್ಯಚಿತ್ರ ಇದಾಗಿದೆ. ಇಂಥದ್ದೊಂದು ಸಾಕ್ಷ್ಯಚಿತ್ರ ಬಿಡುಗಡೆ ಮಾಡಬೇಕೆಂಬುದು ಅಪ್ಪು ಕನಸಲಾಗಿತ್ತು. ಆದರೆ ಅದರ ಬಿಡುಗಡೆಗೂ ಮುನ್ನವೇ ಇಹಲೋಹ ತ್ಯಜಿಸಿದರು ಅಪ್ಪು. ಅವರ ಕನಸಿನ ಕೂಸಾದ ಈ ಸಾಕ್ಷ್ಯಚಿತ್ರದ ಟೀಸರ್‌ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾದಿದ್ದು, ಇದೀಗ ಎಲ್ಲರೂ ನಮ್ಮ ನೆಚ್ಚಿನ ನಟನನ್ನು ಸಾಕ್ಷ್ಯಚಿತ್ರದಲ್ಲಿ ನೋಡಿ ಕಣ್ಣೀರಾಗುತ್ತಿದ್ದಾರೆ.

ಸಾಕ್ಷ್ಯಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅಪ್ಪು ಅಭಿಮಾನಿಗಳು ಪುಳಕಿತಗೊಳ್ಳುತ್ತಿದ್ದಾರೆ. ಕರ್ನಾಟಕದ ದಟ್ಟಾರಣ್ಯದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಪ್ರಕೃತಿ ಸೌಂದರ್ಯವನ್ನು, ವನ್ಯಜೀವಿಗಳ ಜೀವನವನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ‘ಪಿಆರ್​ಕೆ ಆಡಿಯೋ’ ಯೂಟ್ಯೂಬ್ ಚಾನೆಲ್‌ನಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ.

‘ಗಂಧದ ಗುಡಿ’ ಸಾಕ್ಷ್ಯಚಿತ್ರವು ಥಿಯೇಟರ್​ನಲ್ಲಿ ಬಿಡುಗಡೆ ಆಗಲಿದೆ. 2022ರಲ್ಲಿ ಚಿತ್ರಮಂದಿರಗಳಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.

ಇಲ್ಲಿದೆ ನೋಡಿ ಟೀಸರ್‌: (ಕೃಪೆ ಪಿಆರ್‌ಕೆ ಆಡಿಯೋ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net