

ಆನೇಕಲ್: ಮಾತ್ರೆ ತಯಾರಿಕಾ ಕಚ್ಚಾವಸ್ತುಗಳನ್ನು ಇಟ್ಟ ಗೋದಾಮಿಗೆ ನಡುರಾತ್ರಿ ಬೆಂಕಿ ಹೊತ್ತಿಕೊಂಡು ಧಗಧಗ ಉರಿದ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ.
ಆನೇಕಲ್ಲಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆಸಿದೆ. ಮಧ್ಯರಾತ್ರಿ ಸುಮಾರು 2.30ರ ಹೊತ್ತಿಗೆ ಬೆಂಕಿ ಹೊತ್ತಿಕೊಂಡಿದೆ. ಬಾಲ್ ಫಾರ್ಮಾ ಹೆಸರಿನ ಕಚ್ಚಾ ಸಾಮಗ್ರಿ ಶೇಖರಣಾ ಗೋದಾಮ ಇದಾಗಿದ್ದು, ಮಾತ್ರೆಗಳ ತಯಾರಿಕೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಇಲ್ಲಿ ಶೇಖರಣೆ ಮಾಡಲಾಗುತ್ತದೆ.
ಕೆಮಿಕಲ್ ರಿಯಾಕ್ಷನ್ ನಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ಹೇಳಲಾಗಿದೆ. ಅಗ್ನಿಗೆ ಲಕ್ಷಾಂತರ ಮೌಲ್ಯದ ಮಾತ್ರೆ ತಯಾರಿಕಾ ಕಚ್ಚಾವಸ್ತುಗಳು ಆಹುತಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಇಲ್ಲಿದೆ ನೋಡಿ ವಿಡಿಯೋ: