

ತುಮಕೂರು: ಮಂಡ್ಯದ ಕಾಲೇಜಿನಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಕೂಗಿ ವಿಶ್ವಾದ್ಯಂತ ರಾತ್ರೋರಾತ್ರಿ ಪ್ರಚಾರ ಗಿಟ್ಟಿಸಿದ್ದ ವಿದ್ಯಾರ್ಥಿನಿಯ ಕುರಿತಾಗಿ ಹಲವರು ಅನೇಕ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಯ ಹಿಂದೆ ಯಾವುದೇ ಪಿತೂರಿ ಇದೆ ಎಂದು ಖುದ್ದು ಪಾಕಿಸ್ತಾನದ ಟಿವಿಯಲ್ಲಿಯೂ ಚರ್ಚೆ ನಡೆದಿದೆ. ಇಡೀ ಘಟನೆಯ ಕುರಿತಂತೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತಿದೆ. ಅದೇ ಇನ್ನೊಂದೆಡೆ ಈ ವಿದ್ಯಾರ್ಥಿನಿ ‘ಸ್ಟಾರ್’ ಕೂಡ ಆಗಿದ್ದು, ಲಕ್ಷ ಲಕ್ಷ ಬಹುಮಾನಗಳನ್ನೂ ಗಳಿಸಿಕೊಂಡಿದ್ದಾಳೆ.
ಈ ಘಟನೆಯ ಸತ್ಯಾಂಶ ಇನ್ನೂ ಹೊರಬರುವ ಮುನ್ನವೇ, ತುಮಕೂರಿನ ಎಸ್ವಿಎಸ್ ಪಬ್ಲಿಕ್ ಸ್ಕೂಲ್ ಮುಂದೆ ಅಲ್ಲಾಹು ಅಕ್ಬರ್ ಘೋಷಣೆ ಮೊಳಗಿದೆ. ಆದರೆ ಇಲ್ಲಿ ಈ ಘೋಷಣೆ ಮಾಡಿದವರು ವಿದ್ಯಾರ್ಥಿನಿಯರ ಪಾಲಕರು.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ ಎನ್ನುವುದೇ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಮುಂದೆ ಜಮಾಯಿಸಿದ ಪಾಲಕರ ಪೈಕಿ ಹಲವರು ಗಲಾಟೆ ಮಾಡಿದ್ದು, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಾರೆ.
ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪಿಎಸ್ ಐ ಚಂದ್ರಕಲಾ,ಇನ್ಸ್ಪೆಕ್ಟರ್ ಮುನಿರಾಜು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನದಲ್ಲಿ ತೊಡಗಿದರು. ಹೆಚ್ಚಿನ ಗಲಾಟೆ ಆಗದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ: