More

    VIDEO: ‘ಐದು ವರ್ಷದಿಂದ ನೋಡ್ತಿದ್ದೇನೆ, ಯಾರೂ ಹಿಜಾಬ್‌ ಹಾಕ್ತಿರಲಿಲ್ಲ- ಮೊದ್ಲು ಭಾಷೆ ಭಾಷೆ ಅಂದ್ರು, ಈಗ ನೋಡಿದ್ರೆ ಹೀಗೆ…’

    ಉಡುಪಿ: ಕರ್ನಾಟಕದ ಉಡುಪಿಯಿಂದ ಶುರುವಾಗಿರುವ ಹಿಜಾಬ್‌ ಗಲಾಟೆ ಇದೀಗ ರಾಜ್ಯ ಮಾತ್ರವಲ್ಲದೇ ದೇಶವನ್ನೂ ದಾಟಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಏಕಾಏಕಿ ಶುರುವಾಗಿರುವ ಈ ಹಿಜಾಬ್‌ ವಿವಾದದ ಹಿನ್ನೆಲೆ ಮಾತ್ರ ಇದುವರೆಗೂ ನಿಗೂಢವಾಗಿಯೇ ಉಳಿದಿದೆ. ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವುದು ಬಿಟ್ಟರೆ ನಿಜಕ್ಕೂ ಈ ವಿವಾದ ಹುಟ್ಟಿದ್ದು ಹೇಗೆ ಎಂಬ ಬಗ್ಗೆ ಇನ್ನೂ ನಿಗೂಢವಾಗಿಯೇ ಉಳಿದಿದೆ.

    ಇದರ ನಡುವೆಯೇ ಉಡುಪಿಯ ವಿದ್ಯಾರ್ಥಿನಿಯೊಬ್ಬಳು ನೀಡಿರುವ ಹೇಳಿಕೆ ಇದೀಗ ಹಿಜಾಬ್‌ ಗಲಾಟೆಯ ಬಗ್ಗೆ ಸಾಕಷ್ಟು ಅನುಮಾನ ಮೂಡುವಂತೆ ಮಾಡಿದೆ. ಹಿಜಾಬ್‌ ಧರಿಸಬೇಕು ಎಂದು ಉಡುಪಿಯ ಕಾಲೇಜಿನಲ್ಲಿ ಗಲಾಟೆ ಎಬ್ಬಿಸಿರುವ ಆರು ಮಂದಿ ವಿದ್ಯಾರ್ಥಿನಿಯರ ವಿರುದ್ಧ ಮಾತನಾಡಿದ್ದಾಳೆ ಈ ವಿದ್ಯಾರ್ಥಿನಿ. ತಾವು ಈ ಮೊದಲು ಹಿಜಾಬ್‌ ಧರಿಸುತ್ತಿರುವುದಾಗಿ ಗಲಾಟೆ ಮಾಡುತ್ತಿರುವ ವಿದ್ಯಾರ್ಥಿನಿಯರು ಆರೋಪಿಸುತ್ತಿದ್ದರೆ, ಇದೀಗ ಕಳೆದ ಐದು ವರ್ಷಗಳಿಂದ ಯಾರೊಬ್ಬರೂ ಹಿಜಾಬ್‌ ಧರಿಸುತ್ತಲೇ ಇರಲಿಲ್ಲ. ನಾನು ಐದು ವರ್ಷಗಳಿಂದ ಇದೇ ಕಾಲೇಜಿನಲ್ಲಿ ಕಲಿತಿರುವುದಾಗಿ ಈಕೆ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾಳೆ.

    ‘ಅವರೆಲ್ಲಾ ಪ್ರಥಮ ಪಿಯುಸಿಯಲ್ಲಿ ಹಿಜಾಬ್‌ ಧರಿಸುತ್ತಿದ್ದೆವು ಎಂದು ಹೇಳುತ್ತಿದ್ದಾರೆ. ಪ್ರಥಮ ಪಿಯುಸಿಯ ತರಗತಿ ಎಲ್ಲಿ ಶುರುವಾಗಿತ್ತು. ನಮಗೆಲ್ಲಾ ಆನ್‌ಲೈನ್‌ ಕ್ಲಾಸ್‌ ಇತ್ತು. 8ನೇ ಕ್ಲಾಸ್‌ನಿಂದ 12ನೇ ಕ್ಲಾಸ್‌ವರೆಗೂ ಇದೇ ಸಂಸ್ಥೆಯಲ್ಲಿಯೇ ನಾನು ಕಲಿಯುತ್ತಿದ್ದೇನೆ. ಯಾರೂ ಇಲ್ಲಿಯವರೆಗೆ ಹಿಜಾಬ್‌ ಧರಿಸಿ ಕ್ಲಾಸಿಗೆ ಬರಲಿಲ್ಲ. ಕಳೆದ ವರ್ಷ ಕಾಲೇಜಿಗೇ ಬರದೇ, ಪರೀಕ್ಷೆಯೂ ನಡೆದಿರಲಿಲ್ಲ. ನಮ್ಮನ್ನೆಲ್ಲಾ ಹಾಗೆಯೇ ಪಾಸ್‌ ಮಾಡಿದ್ದಾರೆ. ಮೂರು ತಿಂಗಳು ಕ್ಲಾಸ್‌ ನಡೆದಿತ್ತು. ಆಗಲೂ ಯಾರೂ ಹಿಜಾಬ್‌ ಧರಿಸಿ ಕ್ಲಾಸ್‌ಗೆ ಬಂದಿರಲಿಲ್ಲ. ಈಗ ಏಕಾಏಕಿ ಯಾಕೆ ಹೀಗೆ ಗಲಾಟೆ ಮಾಡುತ್ತಿದ್ದಾರೋ ಗೊತ್ತಿಲ್ಲ’ ಎಂದಿದ್ದಾಳೆ ಈ ವಿದ್ಯಾರ್ಥಿನಿ.

    ಇವರ ಈ ಗಲಾಟೆ ಕಳೆದ ನವೆಂಬರ್‌-ಡಿಸೆಂಬರ್‌ನಿಂದ ಶುರುವಾಗಿದೆ. ಆನ್‌ಲೈನ್‌ ಕ್ಲಾಸ್‌ ಮುಗಿಸಿ ತರಗತಿ ಆರಂಭವಾದಾಗ ಮೊದಮೊದಲು ಭಾಷೆ ಭಾಷೆ ಎಂದು ಗಲಾಟೆ ಶುರು ಮಾಡಿದ್ದರು. ನಮಗೆ ಉರ್ದು, ಬ್ಯಾರಿ ಭಾಷೆಯಲ್ಲಿ ಮಾತನಾಡಲು ಕೊಡ್ತಿಲ್ಲ ಎಂದು ಗಲಾಟೆ ಮಾಡಿದರು. ಆಗ ನಾವೆಲ್ಲಾ ನಾವು ಕ್ಲಾಸ್‌ನಲ್ಲಿ ತುಳು ಮಾತನಾಡ್ತೇವೆ, ಯಾರೂ ನಮಗೆ ಏನೂ ಅನ್ನಲಿಲ್ಲ, ನಿಮಗೆ ಬೈಯುತ್ತಿರುವವರು ಯಾರು ಎಂದು ಪ್ರಶ್ನೆ ಮಾಡಿದ್ವಿ. ಅದಕ್ಕೆ ಉತ್ತರ ಇಲ್ಲದೇ ಆ ವಿಷಯವನ್ನು ಅಲ್ಲಿಗೇ ಬಿಟ್ಟರು. ಈಗ ಹಿಜಾಬ್‌ ಹಿಜಾಬ್‌ ಎಂದು ಶುರು ಮಾಡಿಕೊಂಡಿದ್ದಾರೆ. ಆ ಆರು ಮಂದಿ ಸಲುವಾಗಿ ಇಡೀ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ. ಎಲ್ಲರೂ ನಮ್ಮ ಕಾಲೇಜಿನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಅವರ ಸಲುವಾಗಿ ನಮ್ಮ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳಲು ನಮಗೆ ಇಷ್ಟವಿಲ್ಲ. ಅದಕ್ಕಾಗಿ ಬೇಗ ಕ್ಲಾಸ್‌ ಶುರು ಮಾಡುವಂತೆ ನಾವೆಲ್ಲಾ ಮನವಿ ಸಲ್ಲಿಸಿದ್ದೇವೆ’ ಎಂದಿದ್ದಾಳೆ ವಿದ್ಯಾರ್ಥಿನಿ.

    VIDEO: ‘ಏಯ್‌… ವಿಡಿಯೋ ಮತ್ ಕರ್…’ ತಲೆಗೆ ಕೇಸರಿ ಶಾಲು ಧರಿಸಿದವರಾರು? ಕಿಚ್ಚು ಹೊತ್ತಿಸಿದ ವೈರಲ್‌ ವಿಡಿಯೋ

    VIDEO: ‘ಅಲ್ಲಾಹು ಅಕ್ಬರ್‌’: ಘಟನೆ ಪೂರ್ವನಿಯೋಜಿತ ಎಂದ ಪಾಕಿಸ್ತಾನದ ಚಾನೆಲ್‌! ಶಾಕಿಂಗ್‌ ವಿಡಿಯೋ ಇಲ್ಲಿದೆ…

    ರೇಪ್‌ಗೂ ಹಿಜಾಬ್‌ಗೂ ಸಂಬಂಧ ಕಲ್ಪಿಸಿ ಉಲ್ಟಾ ಹೊಡೆದ ಜಮೀರ್‌: ಮುಜುಗರದಲ್ಲಿ ಕಾಂಗ್ರೆಸ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts