

ಬೆಂಗಳೂರು: ಇದೇ 14ರ ಶುಕ್ರವಾರ ಅಕ್ಷಯ ತೃತೀಯ. ಅಂದು ಅನೇಕ ಮಂದಿ ಶುಭಕಾರ್ಯಗಳನ್ನು ನೆರವೇರಿಸಿದ್ದಾರೆ. ಈ ಶುಭ ಗಳಿಗೆಯಂದು ಕಿರುತೆರೆ ನಟ ದಂಪತಿ ರಾಧಿಕಾ ಮತ್ತು ಶ್ರವಂತ್ ತಮ್ಮ ಪುತ್ರಿ ಜಾಹ್ನವಿಗೆ ಅನ್ನಪ್ರಾಶನ ಮಾಡಿದ್ದಾರೆ.
ಇದರ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿಗೆ ಜನರನ್ನು ಆಹ್ವಾನ ನೀಡದ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಾದಿಯಾಗಿ ಎಲ್ಲರೂ ಅನ್ನಪ್ರಾಶನ ಸಮಾರಂಭವನ್ನು ಈ ವಿಡಿಯೋದ ಮೂಲಕ ನೋಡಲು ಅನುವು ಮಾಡಿಕೊಟ್ಟಿದ್ದಾರೆ.
'ಅಕ್ಷಯ ತೃತಿಯ ಶುಭ ದಿನದಂದು ನಮ್ಮ ಮಗಳಿಗೆ ಅನ್ನಪ್ರಾಶನ ಮಾಡಿದೆವು. ನನ್ನ ಮಗಳಿಗೆ ಮೊದಲ ಬಾರಿ ಅನ್ನ ತಿನ್ನಿಸಿದ ಸಂಭ್ರಮವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿರುವೆ. ಆಕೆಯ ರಿಯಾಕ್ಷನ್ ನೋಡಲು ನಾವು ತುಂಬಾ ಎಕ್ಸ್ಯಾಟ್ ಆಗಿದ್ದೆವು’ ಎಂದು ರಾಧಿಕಾ ಹೇಳಿದ್ದಾರೆ.
ಅಪ್ಪನ ಕಾಲಿನ ಮೇಲೆ ಕುಳಿತು ಜಾಹ್ವನಿ ಊಟ ಮಾಡುತ್ತಿರುವ ದೃಶ್ಯವನ್ನು ಸಹಸ್ರಾರು ಅಭಿಮಾನಿಗಳು ನೋಡಿ ಖುಷಿಪಟ್ಟಿದ್ದಾರೆ. ಇದಾಗಲೇ ಮಗಳ ಹೆಸರಿನ್ಲಲಿ ರಾಧಿಕಾ ಇನ್‌ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ.