

ಚಿತ್ರದುರ್ಗ: ಚಿತ್ರದುರ್ಗ ಬಳಿಯ ರಾಷ್ಟ್ರೀಯ ಹೆದ್ದಾರಿ 150ಎ ಬಳಿ ಇಂದು ನಡೆದಿರುವ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಈ ಅನಾಹುತ ನಡೆದಿದೆ. ಎಂಟು ಮಂದಿಗೆ ತೀವ್ರವಾಗಿ ಗಾಯಗಳಾಗಿವೆ. ಮೊಳಕಾಲ್ಮೂರು ತಾಲೂಕಿನ ಕೊಮ್ಮನಪಟ್ಟಿ ಬಳಿ ಈ ದುರಂತ ಸಂಭವಿಸಿದೆ. ಹುಂಡೈ ಮತ್ತು ಮಾರುತಿ ಕಾರುಗಳ ನಡುವೆ ಈ ಢಿಕ್ಕಿ ಸಂಭವಿಸಿದೆ.
ಮೃತರನ್ನು ಚಿತ್ರದುರ್ಗದ ಮಹೇಂದ್ರ (50) ಹಾಗೂ ಬೆಂಗಳೂರಿನ ವನಜಾಕ್ಷಿ (36) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಈ ಅಪಘಾತ ಹೇಗೆ ಸಂಭವಿಸಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.