ಶ್ರೀಮಂತರ ಮಕ್ಕಳ ಹಣದ ಅಮಲಿಗೆ ಬೆಂಗಳೂರಲ್ಲಿ ಮತ್ತೆ ಅಪಘಾತ- ಜಾಲಿ ರೈಡ್‌ಗೆ ಕ್ಯಾಬ್‌ ನಜ್ಜುಗುಜ್ಜು

accident
Published on

ಬೆಂಗಳೂರು: ಅಪ್ಪ ಮಾಡಿಟ್ಟ ಆಸ್ತಿಯ ಅಮಲಿನಲ್ಲಿ ತೇಲಾಡುತ್ತಿರುವ ಶ್ರೀಮಂತರ ಮಕ್ಕಳ ಜಾಲಿರೈಡ್‌ನಿಂದ ಇದಾಗಲೇ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಇಂಥವರ ಪುಂಡಾಟಿಕೆ ನಿಲ್ಲುತ್ತಿಲ್ಲ. ಹಣದ ಅಮಲಿನಲ್ಲಿ ತೇಲಾಡುತ್ತಿರುವ ಇಂಥವರಿಂದ ಬಡವರ ಪ್ರಾಣಕ್ಕೆ ಕಂಟಕ ತಪ್ಪುತ್ತಿಲ್ಲ.

ಈಗ ಅಂಥದ್ದೇ ಇನ್ನೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶನಿವಾರ ಮಧ್ಯರಾತ್ರಿಯ ವೇಳೆ ಕಮಾಂಡೊ ಆಸ್ಪತ್ರೆಯ ಬಳಿ ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಉದ್ಯಮಿ ಕರೀಮ್ ಮೆವಾನಿ ಮಗ ಜಾವೇರ್‌ ಹಾಗೂ ಸೊಸೆ ಇದ್ದ ಕಾರು ಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್‌ ಯಾರ ಪ್ರಾಣಕ್ಕೂ ಹಾನಿಯಾಗಲಿಲ್ಲ. ಆದರೆ ಡಿಕ್ಕಿಯ ರಭಸಕ್ಕೆ ಕ್ಯಾಬ್ ಸಂಪೂರ್ಣ ಜಖಂ ಆಗಿದೆ.

ಈತ ಟೆಕ್ಸ್‌ಟೈಲ್‌ ಮಾಲೀಕನ ಮಗನಾಗಿರುವ ಜಾವೇರ್‌ ಹಾಗೂ ಆತನ ಸ್ನೇಹಿತರು ಇಂದಿರಾನಗರದಲ್ಲಿ ಪಾರ್ಟಿ ಮುಗಿಸಿ ಮೂರು ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದರು. ಈತನ ಜತೆ ಪತ್ನಿ ಶ್ರೇಯಾ ಕೂಡ ಇದ್ದರು. ಇವರ ಈ ಜಾಲಿ ರೈಡ್‌ನಿಂದ ಕೇಶವಮೂರ್ತಿ ಎಂಬುವರ ಕ್ಯಾಬ್‌ಗೆ ಡಿಕ್ಕಿ ಉಂಟಾಗಿದೆ. ಕ್ಯಾಬ್‌ನಲ್ಲಿ ಮೂವರು ಪ್ರಯಾಣಿಕರಿಬ್ಬರು.

ಇಷ್ಟಾದರು ಕೂಡ ಮದ್ಯದ ಅಮಲಿನಲ್ಲಿದ್ದ ಜವೇರ್‌ ಜಗಳ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕೇಶವಮೂರ್ತಿ ಹಲಸೂರು ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಈ ಶ್ರೀಮಂತನ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತವಾದ ಜಾವೇರ್‌ನ ಕಾರು, ಕ್ಯಾಬ್ ವಶಕ್ಕೆ ಪಡೆಯಲಾಗಿದೆ. ಬಿಳಿ ಪೋರ್ಶೆ ಕಾರು 100 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿತ್ತು. ಜಾವೆರ್ ಮೆವಾನಿ ನಿರ್ಲಕ್ಷ್ಯದಿಂದ ಐಷಾರಾಮಿ ಕಾರು ಅಪಘಾತಕ್ಕೀಡಾಗಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net