ಚಿನ್ನದಂಗಡಿಯಲ್ಲಿ ಕೆಲಸಕ್ಕಿದ್ದುಕೊಂಡೇ ಕಳ್ಳತನಕ್ಕೆ ಸ್ಕೆಚ್​! ತುಮಕೂರಲ್ಲಿ ಸಿಕ್ಕಿಬಿದ್ದ ಅಂತರ್​ರಾಜ್ಯ ದರೋಡೆಕೋರರು!

accused
Published on

ತುಮಕೂರು: ತುಮಕೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜ್ಯುವೆಲ್ಲರಿ ಶಾಪ್​ಗಳನ್ನು ಟಾರ್ಗೆಟ್ ಮಾಡುತ್ತಿದ್ದ ಅಂತರ್ ರಾಜ್ಯ ದರೋಡೆಕೋರರ ಬಂಧನ ಮಾಡಿದ್ದಾರೆ.

ಓರ್ವ ಅಪ್ರಾಪ್ತ ಬಾಲಕ ಸೇರಿ 4 ಜನ ಆರೋಪಿಗಳ ಬಂಧನವಾಗಿದೆ. ಮಹಾರಾಷ್ಟ್ರ ಮೂಲದ ದಿಗಂಬರ್ ಕಿರಣ್ ಕುಂಡ್ಲಿಕ್ ಸುಳೆ, ರಾಜಸ್ಥಾನ ಮೂಲದ ಸಿದ್ದನಾಥ ರಾಮಚಂದ್ರ ಪಡಾಲ್ಕರ್, ಹರ್ಷವರ್ಧನ್ ಬಾಳಿರಾಂ ಮಾನೆ, ವಿವೇಕ್ ದೌಲತ್ ರಾವ್ ಮೇಟ್ ಕರಿ ಹಾಗೂ ಓರ್ವ ಬಾಲಕನ ಬಂಧನವಾಗಿದೆ.

ಬಂಧಿತರಿಂದ 53 ಲಕ್ಷದ 33 ಸಾವಿರ ಬೆಲೆಬಾಳುವ 1 ಕೆಜಿ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಜ್ಯುವೆಲ್ಲರಿ ಶಾಪ್ ನಲ್ಲಿ ಕೆಲಸದವನಿಂದಲೇ ಕಳ್ಳತನಕ್ಕೆ ಪ್ಲಾನ್ ಮಾಡಿ ಇವರೆಲ್ಲ ಸಿಕ್ಕಿಬಿದ್ದಿದ್ದಾರೆ. ತುಮಕೂರು ನಗರದ ಗೋಲ್ಡ್ ಟೆಸ್ಟಿಂಗ್ ಶಾಪ್ ನಲ್ಲಿ ಕೆಲಸಕ್ಕಿದ್ದ ಪ್ರಮುಖ ಆರೋಪಿ ದಿಗಂಬರ್ ಕಿರಣ್. ರಜೆ ನಿಮಿತ್ತ ರಾಜಸ್ಥಾನಕ್ಕೆ ಹೋದಾಗ ತನ್ನ ಸ್ನೇಹಿತರಿಗೆ ಸುಲಭವಾಗಿ ಹಣ ಗಳಿಸುವ ಬಗ್ಗೆ ಪ್ಲಾನ್ ನೀಡಿದ್ದ‌.

ತುಮಕೂರು ನಗರದಲ್ಲಿ ಓರ್ವ ವ್ಯಕ್ತಿ ಬೆಂಗಳೂರಿನಿಂದ ತುಮಕೂರಿಗೆ ಚಿನ್ನಾಭರಣಗಳನ್ನ ಸರಬರಾಜು ಮಾಡುತ್ತಿದ್ದ‌. ಆತನನ್ನ ಅಟ್ಯಾಕ್ ಮಾಡಿದ್ರೆ ಸುಲಭವಾಗಿ ಹಣ ಗಳಿಸಬಹುದೆಂದು ಪ್ಲ್ಯಾನ್ ಕೊಟ್ಟಿದ್ದ ದಿಗಂಬರ್ ಕಿರಣ್. ಆತನ ಯೋಜನೆಯಂತೆ ತುಮಕೂರು ನಗರದಲ್ಲಿ ಲಾಡ್ಜ್ ರೂಂ ಬಾಡಿಗೆ ಪಡೆದಿದ್ದರು ಖದೀಮರು.

ಕಳೆದ ಮೇ 5 ರಂದು ನಗರದ ಎಂಜಿ ರೋಡ್ ಬಳಿ ಅಟ್ಯಾಕ್ ಮಾಡಿ ಸುಮಾರು 1 ಕೆಜಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್ ಪಿ ಶ್ರೀನಿವಾಸ್ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಬಲೆ‌ ಬೀಸಿದ್ದರು. ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗಿದ್ದ ಆರೋಪಿಗಳು ರಾಜಸ್ಥಾನದಲ್ಲಿ ಬಂಧನವಾಗಿದೆ. ತುಮಕೂರು ನಗರ ಪೊಲೀಸರಿಂದ ಮುಂದುವರಿದ ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net