ಒಂದೇ ದಿನ 33 ಸಾವಿರ ಹಾಸಿಗೆ, 10 ಸಾವಿರಕ್ಕೂ ಅಧಿಕ ಆಕ್ಸಿನೇಟೇಡ್ ಬೆಡ್ ರೆಡಿ ಮಾಡಿದ ಸರ್ಕಾರ

bed
Published on

ಬೆಂಗಳೂರು: ಕರೊನಾ ಸೋಂಕು ತೀವ್ರಗತಿಯಲ್ಲಿ‌ ಏರಿಕೆಯಾಗುತ್ತಲೇ ಇದೆ. ಸೋಂಕಿತರಿಗೆ ಅಗತ್ಯ ಆರೈಕೆ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡುತ್ತಿದೆ.

ಈ ಬಗ್ಗೆ ವಿವರಣೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಿನ್ನೆಯಷ್ಟೇ 33 ಸಾವಿರ ಹಾಸಿಗೆ ಸಿದ್ಧ ಮಾಡಿದ್ದೇವೆ. ಇದರಲ್ಲಿ 10,083 ಆಕ್ಸಿನೇಟೇಡ್ ಬೆಡ್ ವ್ಯವಸ್ಥೆಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜನರು ಅನಗತ್ಯ ಗುಂಪುಗೂಡುವುದನ್ನು ಮೊದಲು ಬಿಡಬೇಕು ಎಂದ ಅವರು ಜನರಲ್ಲಿ ಉದಾಸೀನ ಹೆಚ್ಚಾಗಿದೆ. ನಾವು ಪದೇ ಪದೆ ಎಚ್ಚರಿಕೆ ಕೊಡುತ್ತಿದ್ದೇವೆ. ಜನರು ನಡವಳಿಕೆ ಸುಧಾರಣೆ ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಮುಂದಿನ ದಿನ ಅಪಾಯ ಎದುರಾಗುತ್ತದೆ ಎಂದರು.

ಲಾಕ್‌ಡೌನ್ ಅಥವಾ ಕರ್ಫ್ಯೂ ಬೇಡ ಎಂದರೆ‌ ಜನರೇ‌ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net