

ಅಮಾಸೆಬೈಲು: ಕೆಸರುಗದ್ದೆ ಕ್ರೀಡಾಕೂಟ ಗ್ರಾಮೀಣ ಕ್ರೀಡೆಯಾಗಿದೆ. ಇದನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಕಳೆದ 29 ವರ್ಷಗಳಿಂದ ರಟ್ಟಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವು ವರ್ಷದಿಂದ ವರ್ಷಕ್ಕೆ ಅದ್ದ್ಧೂರಿಯಾಗಿ ನಡೆದು ಬಂದಿದ್ದು, ಈ ವರ್ಷ ಹಮ್ಮಿಕೊಂಡ ಕೆಸರುಗದ್ದೆ ಕ್ರೀಡಾಕೂಟ ಮತ್ತುಷ್ಟು ಮೆರುಗು ತಂದಿದೆ ಎಂದು ಶಾಸಕ ಎ.ಕಿರಣ್ ಕುವಾರ್ ಕೊಡ್ಗಿ ಹೇಳಿದರು.
ರಟ್ಟಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ರಟ್ಟಾಡಿ ಬಕ್ಕರ್ಕೆ ಸತ್ಯನಾರಾಯಣ ರಾವ್ ಗದ್ದೆಯಲ್ಲಿ ಇತ್ತೀಚೆಗೆ ನಡೆದ ಗ್ರಾಮೀಣ ಕ್ರೀಡಾಕೂಟ ಕೆಸರಾಟ- 2025 ಉದ್ಘಾಟಿಸಿ ವಾತನಾಡಿದರು.
ರಟ್ಟಾಡಿ ಶ್ರೀರಟ್ಟೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಆರ್.ನವೀನಚಂದ್ರ ಶೆಟ್ಟಿ ರಟ್ಟಾಡಿ ವಾತನಾಡಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜನ್‌ಕುವಾರ್ ಶೆಟ್ಟಿ, ಅವಾಸೆಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ಕುಲಾಲ್, ಸದಸ್ಯ ಜಯಪ್ರಕಾಶ್ ಶೆಟ್ಟಿ, ರಟ್ಡಾಡಿ ಹಾಲು ಉತ್ಪಾದಕರ ಸಹಕಾರಿ ಸಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಅವಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಸದಾನಂದ ಶೆಟ್ಟಿ, ಹಾಲಾಡಿ ಗ್ರಾಮ ಪಂಚಾಯಿತಿ ಸದಸ್ಯ ಜನಾರ್ದನ ಹಾಲಾಡಿ, ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಹೆಗ್ಡೆ, ರುರಾಮ್ ಶೆಟ್ಟಿ ಹೊಸಬಾರು, ಡಾ.ದಿಶಾ ಶೆಟ್ಟಿ ಹೊಸಬಾರು ಉಪಸ್ಥಿತರಿದ್ದರು.
ಕ್ರೀಡಾಕೂಟದ ಅಂಗವಾಗಿ ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಸತ್ಯನಾರಾಯಣ ರಾವ್ ನಿರೂಪಿಸಿದರು. ಪ್ರವೀಣ್ ಹೆಗ್ಡೆ ವಂದಿಸಿದರು.