

ಕೋಟ: ಹಂಗಾರಕಟ್ಟೆ ಬಾಳ್ಕದ್ರು ಪರಿಸರದ 49ನೇ ವರ್ಷದ ಶ್ರೀ ಗಣೇಶೋತ್ಸವದ ಅಂಗವಾಗಿ ಸರ್ವೋದಯ ಯುವಕ ಮಂಡಲ, ಹಂಗಾರಕಟ್ಟೆ ಮಹಿಳಾ ಮಂಡಲ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ ಬಾಳ್ಕುದ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ರೋಟರಿ ಕ್ಲಬ್ ಸಾಸ್ತಾನ ಹಂಗಾರಕಟ್ಟೆ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಉದ್ಘಾಟಿಸಿದರು. ಸರ್ವೋದಯ ಯುವಕ ಮಂಡಲ ಅಧ್ಯಕ್ಷ ವಿಜೇತ್ ದೇವಾಡಿಗ, ಮಹಿಳಾ ಮಂಡಲ ಅಧ್ಯಕ್ಷೆ ರೇಖಾ ಪಿ.ಸುವರ್ಣ, ಶಾಲಾ ಉಸ್ತುವಾರಿ ಸಂಘ ಅಧ್ಯಕ್ಷ ಸುಭಾಷ್ ಪೂಜಾರಿ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಶೇಖರ್ ಗದ್ದೆಮನೆ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಅಧ್ಯಕ್ಷ ವಿಜಯ್ ಪೂಜಾರಿ, ಹಿರಿಯರಾದ ನಾರಾಯಣ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.