

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
1974ರಲ್ಲಿ ಆರಂಭವಾದ ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘ 50 ವರ್ಷ ಪೂರೈಸಲಿದೆ. ಇದರ ಸವಿನೆನಪಿಗಾಗಿ ನವೆಂಬರ್ ತಿಂಗಳಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೈನುಗಾರರು ಹೆಚ್ಚು ಹೆಚ್ಚು ಹಾಲು ಸಂಘಕ್ಕೆ ನೀಡುವುದರಿಂದ ಸಂಘ ಮತ್ತು ಹೈನುಗಾರರ ಅಭಿವೃದ್ಧಿಯಾಗುತ್ತದೆ ಎಂದು ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಎಚ್.ವಿಠಲ ಶೆಟ್ಟಿ ಶೇಡಿಕೊಡ್ಲು ಹೇಳಿದರು.
ಮಂದಾರ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ಸಂಘ ಉಪಾಧ್ಯಕ್ಷ ಕೆ.ಶಂಭುಶಂಕರ ರಾವ್, ನಿರ್ದೇಶಕರಾದ ಎಂ.ರಾಮ ಶೆಟ್ಟಿಗಾರ್, ಕೃಷ್ಣ ನಾಯ್ಕ, ಎಚ್.ಜಯಶೀಲ ಶೆಟ್ಟಿ, ಎ.ವಿಶ್ವನಾಥ ಉಡುಪ, ಎಂ.ರಾಘವೇಂದ್ರ ಅಡಿಗ, ರಾಮಚಂದ್ರ, ನಾಗ, ಕೆ.ಬೇಬಿ ಶೆಡ್ತಿ, ಸಾಕು ಬಾರಾಳಿ, ಪ್ರತಿಭಾ ಶೆಟ್ಟಿ, ಸದಸ್ಯರು, ಸಿಬ್ಬಂದಿ ವರ್ಗ, ಹೈನುಗಾರರು ಉಪಸ್ಥಿತರಿದ್ದರು. ಗೌರವ ಸಲಹೆಗಾರ ಜಯಶೀಲ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರಮೇಶ್ ದೇವಾಡಿಗ ವರದಿ ವಾಚಿಸಿದರು. ಗಣಕ ಯಂತ್ರ ನಿರ್ವಾಹಕಿ ಸ್ವಾತಿ, ಬಿಎಂಸಿ ಸಹಾಯಕ ಎಚ್.ಪ್ರಕಾಶ್ ಶೆಟ್ಟಿ, ಹಾಲು ಪರೀಕ್ಷಕಿ ವಸಂತಿ ಯು. ಪೂಜಾರಿ ಸಹಕರಿಸಿದರು. ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಹೈನುಗಾರರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.