ಗ್ರಾಮೀಣ ಭಾಗದ ಓದುಗರಿಗೆ ನಿರಾಸೆ

04mdl01
ಮುದಗಲ್ ಸಮೀಪದ ಖೈರವಾಡಗಿ ಗ್ರಾಪಂ ವ್ಯಾಪ್ತಿಯಲ್ಲಿನ ಆಶಿಹಾಳ ತಾಂಡಾದಲ್ಲಿ ಗ್ರಾಮ ಗ್ರಂಥಾಲಯ ಉದ್ಘಾಟನೆಗೆ ಸಿದ್ಧಗೊಂಡಿರುವುದು.
Published on

ಮುದಗಲ್: ಜಿಪಂ ಅನುದಾನದ ಅಡಿಯಲ್ಲಿ ಹೊಸದಾಗಿ ಪ್ರತಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಗ್ರಾಮ ಗ್ರಂಥಾಲಯ ಅನುಷ್ಠಾನಗೊಳಿಸಿಲು ಇಲಾಖೆ ಅಧಿಸೂಚನೆ ನೀಡಿದರೂ ಪಿಡಿಒ ನಿರ್ಲಕ್ಷೃದಿಂದ ಓದುಗಾರರಿಂದ ದೂರ ಉಳಿದಿದೆ.

ಸಮೀಪದ ಖೈರವಾಡಗಿ ಗ್ರಾಪಂ ವ್ಯಾಪ್ತಿಯ ಹನುಮನಗುಡ್ಡ ಹಾಗೂ ಆಶಿಹಾಳ ತಾಂಡಕ್ಕೆ ಮಂಜೂರಾದ ಗ್ರಾಮ ಗ್ರಂಥಾಲಯಗಳಿಗೆ ಸಲಕರಣೆಗಳನ್ನು ಈಗಾಗಲೇ ಜಿಪಂ ಪೂರೈಕೆ ಮಾಡಿದೆ. ಅದರೆ, ಪಿಡಿಒ ರಾಮಪ್ಪ ನಾಗಬೇನಾಳ ಸ್ಥಳ ಗುರುತಿಸಿ ಸಲಕರಣೆಗಳನ್ನು ಸ್ಥಳಾಂತರಿಸಲು ಹಿಂದೇಟು ಹಾಕುತ್ತಿದ್ದಾರೆ.

ಗ್ರಾಮ ಗ್ರಂಥಾಲಯ ಹಳ್ಳಿಗಳಲ್ಲಿರುವ ಜನರಿಗೆ ಓದಲು ಮತ್ತು ಕಲಿಯಲು ಅನುಕೂಲವಾಗುವಂತೆ ಪುಸ್ತಕಗಳು, ಸಂಪನ್ಮೂಲಗಳನ್ನು ಸರ್ಕಾರ ಒದಗಿಸಿದೆ. ಅದರೆ, ಸ್ಥಳದ ಕೊರತೆ ನೆಪವೊಡ್ಡಿ ಗ್ರಂಥಾಲಯ ಚಾಲನೆಗೆ ಮೀನಾಮೇಷ ಎಣಿಸುತ್ತಿರುವುದು ಅಲ್ಲಿನ ನಿವಾಸಿಗಳಿಗೆ ಅಸಮಾಧಾನ ಉಂಟು ಮಾಡಿದೆ.

ಸರ್ಕಾರದ ಸೌಲಭ್ಯಗಳನ್ನು ಗ್ರಾಪಂ ಮೂಲಕ ಯೋಜನೆ ಅನುಷ್ಠಾನಗೊಳಿಸದೇ, ಬೇಜವಾಬ್ದರಿತನದ ಹೇಳಿಕೆ ನೀಡಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಕಾಲಹರಣ ಮಾಡದೇ ಮೇಲಾಧಿಕಾರಿಗಳು ಶೀಘ್ರದಲ್ಲೇ ನೂತನ ಗ್ರಾಮ ಗ್ರಂಥಾಲಯ ಚಾಲನೆ ಮಾಡುವವರ ಎಂದು ಕಾದು ನೋಡಬೇಕಿದೆ.

ಪಿಡಿಒ ಅವರ ನಿರ್ಲಕ್ಷ್ಯದಿಂದ ತಾಂಡದ ಗ್ರಂಥಾಲಯ ಉದ್ಘಾಟನೆ ಇಲ್ಲದೆ ಅನಾಥವಾಗಿದೆ. ಕೊಠಡಿ ಗುರುತಿಸಿದ್ದು, ಪೀಠೋಪಕರಣಗಳು ಬಂದು ಹಲವು ವಾರಗಳು ಕಳೆದರೂ ಉದ್ಘಾಟನೆ ಭಾಗ್ಯ ಕಾಣದಿರುವುದು ಬೇಸರದ ಸಂಗತಿ ಭೋದು ನಾಯ್ಕ ಆಶಿಹಾಳ ತಾಂಡದ ನಿವಾಸಿ ಎರಡು ವಾರದ ಹಿಂದೆ ಗ್ರಾಪಂಗೆ ಗ್ರಾಮ ಗ್ರಂಥಾಲಯಗಳ ಸಲಕರಣೆಗಳು ಆಗಮಿಸಿದ್ದು ಶೀಘ್ರದಲ್ಲಿ ಎರಡು ಗ್ರಾಮ ಗ್ರಂಥಾಲಯಗಳನ್ನು ಸಾರ್ವಜನಿಕರ ಸೇವೆಗೆ ಅನುಷ್ಠಾನಗೊಳಿಸಲಾಗುವುದು. ರಾಮಪ್ಪ ನಾಗಬೇನಾಳ ಖೈರವಾಡಗಿ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net