ಗ್ರಾಮೀಣ ವಿದ್ಯಾರ್ಥಿನಿಯರ ಚಿನ್ನದ ಬೇಟೆ

Golden_Girls
Published on

ತುಮಕೂರು: ತುಮಕೂರು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಬೇಟೆಯಲ್ಲಿ ಗ್ರಾಮೀಣ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಎಂ.ಎ.,ಕನ್ನಡ ವಿಭಾಗದ ಡಿ.ಸಿ.ಕಾವ್ಯಾ 4 ಚಿನ್ನದ ಪದಕಕ್ಕೆ ಭಾಜನರಾದರು.

ಎಂ.ಕಾಂ.,ನ ಎಸ್.ಸಂಧ್ಯಾ 3, ಬಿ.ಕಾಂ.,ನ ದೀಪಿಕಾ ಡಿ. ಜೈನ್ 3, ಎಂ.ಎಸ್ಸಿ., ಗಣಿತದಲ್ಲಿ ಎಲ್.ಇ.ಆಶಾ 3 ಹಾಗೂ ಬಿ.ಎ., ಕನ್ನಡ (ಐಚ್ಛಿಕ) ವಿಷಯದಲ್ಲಿ ಆರ್.ಟಿ.ರಮ್ಯಾ 3 ಚಿನ್ನದ ಪದಕಗಳಿಸಿದ್ದಾರೆ. ಹುಸನಾಬೇಗಂ ಎಂ.ಎ., (ಅರ್ಥಶಾಸ್ತ್ರ) 2, ಎ.ಆಕಾಶ್ ಎಂ.ಎ, (ರಾಜ್ಯಶಾಸ್ತ್ರ)-2, ಜಿ.ಉಮೇಶ್ ಎಂಎಸ್‌ಡಬ್ಲೂೃ -2, ಜೆ.ಜಿ.ಮನೋಜ್ ಬಿ.ಎ.,ಕನ್ನಡ (ಐಚ್ಛಿಕ)-2, ಟಿ.ಚೇತನ್ ಎಂ.ಎಸ್ಸಿ (ಜೀವಶಾಸ್ತ್ರ)-2, ಎಸ್.ಪಿ.ರಾಣಿಶ್ರೀ ಬಿ.ಎಸ್ಸಿ (ಪ್ರಾಣಿಶಾಸ್ತ್ರ)-ತಲಾ 2 ಚಿನ್ನದ ಪದಕಕ್ಕೆ ಭಾಜನರಾದರು. 80 ವಿದ್ಯಾರ್ಥಿಗಳು 99 ಚಿನ್ನದ ಪದಕಗಳನ್ನು ಹಾಗೂ ಹತ್ತು ನಗದು ಬಹುಮಾನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net