ಮೃತ ಮಗನ ಜನ್ಮದಿನಕ್ಕೆ ನೋಟ್ ಬುಕ್ ವಿತರಣೆ

ಕನಕಗಿರಿಯ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹೊನ್ನಪ್ಪ ನಾಯಕ ಅವರು ನೋಟ್‌ಬುಕ್ ವಿತರಿಸಿದರು. ಮುಖ್ಯ ಶಿಕ್ಷಕಿ ಶಶಿಕಲಾ, ಮಹ್ಮದ್ ರಫಿ, ಶಿಕ್ಷಕ ಮಲ್ಲಿಕಾರ್ಜುನ ಬಾವಿಕಟ್ಟಿ ಇತರರಿದ್ದರು.

Published on

ಕನಕಗಿರಿ: ಪಟ್ಟಣದ ನಿವಾಸಿ ಹೊನ್ನಪ್ಪ ನಾಯಕ ಅವರು ಮೃತ ಮಗನ ಜನ್ಮದಿನ ಅಂಗವಾಗಿ ಇಲ್ಲಿನ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ ಶನಿವಾರ ವಿತರಿಸಿ ಕಳಕಳಿ ಮೆರೆದಿದ್ದಾರೆ.

800 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್, ಪೆನ್ ವಿತರಣೆ

ಹೊನ್ನಪ್ಪನರ ಪುತ್ರ ಕನಕಮೂರ್ತಿ ಕಳೆದ ವರ್ಷದ ಯುಗಾದಿ ಕರಿಯಂದು ಸ್ನಾನಕ್ಕೆಂದು ತೆರಳಿದ್ದಾಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಮಗನ ಸ್ಮರಣಾರ್ಥವಾಗಿ ಪ್ರೌಢ ಶಾಲೆಯ 800 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್, ಪೆನ್ ವಿತರಿಸಿದರು.
ವಿದ್ಯಾವರ್ಧಕ ಸಂಸ್ಥೆಯ ಆಡಳಿತಾಧಿಕಾರಿ ರಾಮಣ್ಣ ಕುಕನೂರು ಮಾತನಾಡಿ, ಮಗನ ಅಕಾಲಿಕ ಸಾವಿನ ನೋವಿನಲ್ಲಿ ಮಹತ್ತರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಶಿಕ್ಷಕಿ ಶಶಿಕಲಾ, ಮಹ್ಮದ್ ರಫಿ, ಶಿಕ್ಷಕರಾದ ಮಲ್ಲಿಕಾರ್ಜುನ ಬಾವಿಕಟ್ಟಿ, ಗಂಗಾಧರ ಗದ್ದಿ, ಶಿವರೆಡ್ಡಿ ಮಣ್ಣೂರು, ರಮೇಶ ಎಲಿಗಾರ, ಮೌನೇಶ ಬಡಿಗೇರ, ಮುಖಂಡರಾದ ರಂಗಪ್ಪ ಕೊರಗಟಗಿ, ಹೊನ್ನಮ್ಮ ನಾಯಕ, ಚೈತ್ರಾ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net