ಗ್ರಾಮೀಣ ಸೊಗಡು ಉಳಿವಿಗೆ ಮುಂದಾಗಿ

IMG-20240828-WA0030
Published on

ರಾವಂದೂರು: ಗ್ರಾಮೀಣ ಸೊಗಡನ್ನು ಎತ್ತಿ ಹಿಡಿಯುವ ಪ್ರಮುಖ ವೇದಿಕೆಯೇ ಪ್ರತಿಭಾ ಕಾರಂಜಿ ಎಂದು ಡಯಟ್ ಉಪನ್ಯಾಸಕ ತಮ್ಮಯ್ಯ ಹೇಳಿದರು.


ಕಳಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾವಂದೂರು ಹೋಬಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಅಡಗಿರುತ್ತದೆ. ಅಂತಹ ಸುಪ್ತ ಪ್ರತಿಭೆಗಳನ್ನು ಹೊರಚೆಲ್ಲಲು ಇರುವ ವೇದಿಕೆ ಎಂದರೆ ಅದು ಪ್ರತಿಭಾ ಕಾರಂಜಿ. ಆಧುನಿಕತೆ ಹೆಚ್ಚಾದಂತೆ ಗ್ರಾಮೀಣ ಸೊಗಡು ನಶಿಸಿ ಹೋಗದಂತೆ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.


ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದು ಕೇವಲ ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ವೇದಿಕೆಯಷ್ಟೇ ಅಲ್ಲ, ಶಿಕ್ಷಕರ ಪ್ರತಿಭೆಯನ್ನೂ ಅನಾವರಣಗೊಳಿಸುವ ವೇದಿಕೆಯಾಗಿದೆ ಎಂದರು.


ಶಿಕ್ಷಣ ಸಂಯೋಜಕ ಗಣೇಶ್ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸುಜಾತಾ ವಾಸು, ಸದಸ್ಯ ನಂದೀಶ್, ಪ್ರಭು, ಸಿಆರ್‌ಪಿಗಳಾದ ಸೋಮಶೇಖರ್, ನಾಗೇಶ್, ಮುಖ್ಯ ಶಿಕ್ಷಕ ಪ್ರೇಮ್ ಕುಮಾರ್, ಶಿಕ್ಷಕರಾದ ಜೈ ಶಂಕರ್, ಮಂಜುನಾಥ, ಮಹಾದೇವ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net