

ಸಾದಲಿ ಗ್ರಾಮೀಣ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಡಿ.ವಿ. ಓಬಳಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ತಾಲೂಕಿನ ಎಸ್. ದೇವಗಾನಹಳ್ಳಿಯಲ್ಲಿ ಲಕ್ಷ್ಮೀವೆಂಕಟೇಶ್ವರಸ್ವಾಮಿ ಎಜುಕೇಷನಲ್ ಟ್ರಸ್ಟ್ ಹಾಗೂ ಶ್ರೀ ಅಂಬಾ ಕನಕದುರ್ಗ ದೇವಿ ದೇವಾಲಯ ಸೇವಾ ಸಮಿತಿ ಆಯೋಜಿಸಿದ್ದ ನಂದಿ ಉತ್ಸವ 2025ರಲ್ಲಿ ಮಾತನಾಡಿ, ರಾಷ್ಟ್ರಮಟ್ಟದಿಂದ ಹಿಡಿದು ತಳಮಟ್ಟದವರೆಗೂ ಉತ್ತಮ ಮಾರ್ಗದರ್ಶಿ, ಪ್ರೇರಣದಾಯಕ ಕಾರ್ಯಕ್ರಮಗಳು ಜನರ ಹೆಚ್ಚಿನ ಸಹಭಾಗಿತ್ವದಲ್ಲಿ ನಿರಂತರವಾಗಿ ನಡೆಯಬೇಕು. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಡಿ.ವಿ.ಪ್ರಸಾದ್ ವಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಸಂಸ್ಕೃತಿ, ಗ್ರಾಮೀಣ ಭಾಗದ ಕಲೆ, ಪರಂಪರೆ ಪರಿಚಯಿಸುವ ನಿಟ್ಟಿನಲ್ಲಿ ನಂದಿ ಉತ್ಸವ 2025 ಆಯೋಜಿಸಲಾಗಿದೆ ಎಂದು ತಿಳಿಸಿದರು.
ನತ್ಯ ನಿರ್ದೇಶಕ ಎಂ. ಶ್ರೀನಿವಾಸ್, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಡಿ.ಎನ್. ರವಿಚಂದ್ರ, ಗ್ರಾಪಂ ವಾಜಿ ಉಪಾಧ್ಯಕ್ಷ ರಾಮದಾಸ್, ಕಲಾವಿದ ಡಿ.ವಿ. ಶ್ರೀನಿವಾಸ್ ಮೂರ್ತಿ, ಮುಖಂಡರಾದ ವಿಜಯಕುವಾರ್, ಶಿವಕುವಾರ್, ಎಲ್.ಗೋವಿಂದರಾಜ್, ಲಕ್ಷ್ಮೀದೇವಮ್ಮ, ಡಿ.ವಿ.ಗಾಯತ್ರಿ, ಶ್ರೀನಿವಾಸ್, ಡಿ.ವಿ.ಕೊಂಡಪ್ಪ, ಡಿ.ಆರ್.ದೀಪಕ್, ಡಿ.ಜಿ.ಬಾಲಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ
ಸೋಮೇಶ್ವರದಲ್ಲಿರುವ ನಂದೀಶ್ವರ, ಭೃಂಗೇಶ್ವರ, ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಪಂಡಿತ್ ರವಿಕುವಾರ್ ಶರ್ವಾ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕಲಾವಿದ ಯರ‌್ರಾನಾಗೇನಹಳ್ಳಿಯ ಕೃಷ್ಣಪ್ಪ ತಂಡದಿಂದ ನಾದಸ್ವರ ವಾದನ, ಯಶವಂತ್ ಸ್ಕೂಲ್ ಆಫ್ ಡಾನ್ಸ್‌ನ ನತ್ಯ ನಿರ್ದೇಶಕ ಮಂಚನಬಲೆ ಎಂ. ಶ್ರೀನಿವಾಸ್ ನೇತೃತ್ವದ ತಂಡದಿಂದ ಸಾಮೂಹಿಕ ನತ್ಯ, ರಾಜ್ ಡಾನ್ಸ್ ತಂಡದ ನೃತ್ಯ, ಬೆಂಗಳೂರಿನ ಭರತನಾಟ್ಯ ಕಲಾವಿದೆ ಎನ್.ಭುವನೇಶ್ವರಿ ಅವರಿಂದ ಢಮರುಗಂ ಭರತನಾಟ್ಯ, ವಿದ್ಯಾರ್ಥಿಗಳಿಂದ ನೃತ್ಯ, ಗಾಯನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.