

ಕಾರವಾರ: ರಾಜ್ಯ ಬಿಜೆಪಿ 10 ಉಪಾಧ್ಯಕ್ಷರನ್ನು ನೇಮಕ ಮಾಡಿದ್ದು, ಕಾರವಾರ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಅವಕಾಶ ಸಿಕ್ಕಿದೆ.
ರೂಪಾಲಿ ಈ ಹಿಂದೆ ರಾಜ್ಯ ಮಹಿಳಾ ಮೋರ್ಚಾದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು.ಈಗ ಮುಖ್ಯ ಸಮಿತಿಯಲ್ಲೇ ಉಪಾಧ್ಯಕ್ಷ ಹುದ್ದೆ ಲಭಿಸಿದೆ.
ಕಾರವಾರ ಶಾಸಕಿಯಾಗಿ ಮಾಡಿದ ಕಾರ್ಯ ಹಾಗೂ ಪಕ್ಷ ಸಂಘಟನೆಯ ಕಾರ್ಯಗಳನ್ನು ಗಮನಿಸಿ ಅವರಿಗೆ ಹುದ್ದೆ ನೀಡಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ನನಗೆ ಈ ಹೊಣೆಗಾರಿಕೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ಹಿರಿಯ ನಾಯಕರೂ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹಿರಿಯ ನಾಯಕರಾದ ಬಿ.ಎಲ್.ಸಂತೋಷ್, ರಾಜ್ಯ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ಅಭಿನಂದನೆ ಹೇಳುತ್ತೇನೆ.ವಿಶೇಷವಾಗಿ ಕ್ಷೇತ್ರದ ಕಾರ್ಯಕರ್ತರು, ಕ್ಷೇತ್ರದ ಜನತೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ನನಗೆ ನೀಡಿದ ಜವಾಬ್ದಾರಿಯಿಂದ ಪಕ್ಷಸಂಘಟನೆಗಾಗಿ ಶಕ್ತಿಮೀರಿ ದುಡಿಯುತ್ತೇನೆ ಎಂದು ರೂಪಾಲಿ ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕಾಡಿನೂರಿಗೆ ನುಗ್ಗಿದ ವಿಚಿತ್ರ ಪ್ರಾಣಿಗಳು!!