

ಕಾರವಾರ: ಹಾಲಿವುಡ್ ಮೂವಿಯಲ್ಲಿ ಬರುವ ಚಿತ್ರ ವಿಚಿತ್ರ ಪ್ರಾಣಿಗಳು ಶುಕ್ರವಾರ ರಾತ್ರಿ ಕಾಡಿನೂರಿಗೆ ನುಗ್ಗಿದ್ದವು. ಗ್ರಾಮಸ್ಥರು ಅವುಗಳನ್ನು ನೋಡಲು ನೆರೆದಿದ್ದರು.
ಹೌದು, ಕಾರವಾರ ತಾಲೂಕಿನಲ್ಲಿ ಅತಿ ಹೆಚ್ಚು ಕಾಡಿರುವ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ನಡೆದ ಘಟನೆಯಿದು. ಗಾಬರಿಯಾಗಬೇಕಿಲ್ಲ. ಅವ್ಯಾವವೂ ನಿಜವಾದ ಪ್ರಾಣಿಗಳಲ್ಲ. ಪ್ರಾಣಿಯ ಸ್ತಬ್ಧಚಿತ್ರಗಳು.
ತಾಲೂಕಿನ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ನಗೆ ಗ್ರಾಮದಲ್ಲಿ ಶುಕ್ರವಾರ ನಡೆದ ಮಹಾದೇವ ದೇವರ ಜಾತ್ರಾ ಮಹೋತ್ಸವದಲ್ಲಿ ಹಗರಣದ ಸ್ತಬ್ಧ ಚಿತ್ರಗಳು ಗಮನ ಸೆಳೆದವು.
ಇದನ್ನೂ ಓದಿ: ಸಿಲಿಂಡರ್ ಸ್ಫೋಟ-ಹೊತ್ತಿ ಉರಿದ ಮನೆ