ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಪ್ರತಿಷ್ಠಿತ ಪ್ರಶಸ್ತಿಗೆ ವಿಜಯವಾಣಿಯ ರುದ್ರಣ್ಣ ಹರ್ತಿಕೋಟೆ ಆಯ್ಕೆ

Rudranna
Published on

ಬೆಂಗಳೂರು: ಪ್ರೆಸ್​ ಕೌನ್ಸಿಲ್ ಆಫ್ ಇಂಡಿಯಾ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ವಿಜಯವಾಣಿಯ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಅವರು ಆಯ್ಕೆ ಆಗಿದ್ದಾರೆ.

ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ಜರ್ನಲಿಸಂ-2020ಗೆ ಕೇಂದ್ರ ಸರ್ಕಾರ ಸ್ವಾಮ್ಯದ ಪ್ರೆಸ್​ ಕೌನ್ಸಿಲ್ ಆಫ್ ಇಂಡಿಯಾ ರುದ್ರಣ್ಣ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವಿಜಯವಾಣಿಯಲ್ಲಿ 2019ರ ಮೇ 22ರಂದು ಪ್ರಕಟವಾದ ರುದ್ರಣ್ಣ ಹರ್ತಿಕೋಟೆ ಅವರ ವರದಿ ಹಿನ್ನೆಲೆಯಲ್ಲಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪಿಸಿಐ ತಿಳಿಸಿದೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷೆ ನ್ಯಾ. ರಂಜನಾ ಪ್ರಕಾಶ್ ದೇಸಾಯಿ ಅವರು ನವದೆಹಲಿಯಲ್ಲಿ ಕಾನ್​ಸ್ಟಿಟ್ಯೂಷನ್ ಕ್ಲಬ್​ ಆಫ್ ಇಂಡಿಯಾದ ಡೆಪ್ಯುಟಿ ಸ್ಪೀಕರ್ ಹಾಲ್​ನಲ್ಲಿ ಫೆ. 28ರ ಸಂಜೆ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net