

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಮನುಷ್ಯ ಸಹಿತ ಪ್ರತಿಯೊಂದು ಜೀವಿ ಹುಟ್ಟಿದ ಬಳಿಕ ಸಾಯಲೇಬೇಕು ಎನ್ನುವುದು ಸತ್ಯ. ರುದ್ರಭೂಮಿ ಈಶ್ವರನ ವಾಸ ಸ್ಥಾನ. ಪ್ರತಿದಿನ ದೇವರಿಗೆ ಕೈ ಮುಗಿಯುವಂತೆ ರುದ್ರಭೂಮಿಗೂ ಕೈ ಮುಗಿಯಬೇಕಿತ್ತು. ಆದರೆ ಮನುಷ್ಯ ಜೀವಂತ ಇರುವಾಗ ರುದ್ರಭೂಮಿ ಬಗ್ಗೆ ತಾತ್ಸಾರ ಭಾವನೆ ಹೊಂದಿದ್ದಾನೆ ಎಂದು ಮುಂಬೈ ಉದ್ಯಮಿ ವಿವೇಕ್ ಶೆಟ್ಟಿ ಬೊಲ್ಯಗುತ್ತು ಹೇಳಿದರು.
ಮುನ್ನೂರು ಹಿಂದು ರುದ್ರಭೂಮಿ ಸಮಿತಿ ಟ್ರಸ್ಟ್ ಆಶ್ರಯದಲ್ಲಿ ಮುನ್ನೂರು ಹಿಂದು ಮುಕ್ತಿಧಾಮ ಅಭಿವೃದ್ಧಿ ಸಮಿತಿಯಿಂದ ಭಂಡಾರಬೈಲ್ನಲ್ಲಿ ನಿರ್ವಾಣಗೊಂಡ ಹಿಂದು ಮುಕ್ತಿಧಾಮ ಹಾಗೂ ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ಹಿಂದು ಮುಕ್ತಿಧಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಹಾಸ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ವಾಜಿ ಶಾಸಕ ಜಯರಾಮ ಶೆಟ್ಟಿ, ಕುತ್ತಾರ್ ಶ್ರೀ ಪಂಜಂದಾಯ ಬಂಟ ವೈದ್ಯನಾಥ, ಆದಿ ಕೊರಗ ತನಿಯ ಸೇವಾ ಟ್ರಸ್ಟ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಮುಕ್ತಿಧಾಮ ಸಮಿತಿ ಅಧ್ಯಕ್ಷ ಲೋಕನಾಥ ಪೂಜಾರಿ, ಮುನ್ನೂರು ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ, ಸದಸ್ಯ ಬಾಬು ಶೆಟ್ಟಿ, ಸ್ವ ಸಹಾಯ ಗುಂಪುಗಳ ಒಕ್ಕೂಟದ ಪ್ರತಿನಿಧಿ ಅಶೋಕ, ಉದ್ಯಮಿ ಪದ್ಮನಾಭ ಶೆಟ್ಟಿ ಮೊದಲಾದವರಿದ್ದರು.
ಹಿಂದು ಮುಕ್ತಿಧಾಮ ಅಭಿವೃದ್ಧಿ ಸಮಿತಿ ಕೋಶಾಧಿಕಾರಿ ಹರೀಶ್ ಕೊಟ್ಟಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೇಮ್ಚಂದ್ರ ಶೆಟ್ಟಿ ಪ್ರಸ್ತಾವನೆಗೈದರು. ಜಿ.ಪಂ. ವಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ನಿರೂಪಿಸಿದರು. ಉಪಾಧ್ಯಕ್ಷ ಎನ್.ತಿರುಮಲರಾಜ ವಂದಿಸಿದರು.
ನಮ್ಮ ಜಿಲ್ಲೆಯಲ್ಲಿ ಅಸ್ಪಶ್ಯ ಪದ್ಧತಿ ಇಲ್ಲದಿದ್ದರೂ ಹಿಂದು ಸವಾಜದ ಪ್ರತಿಯೊಬ್ಬರಿಗೂ ಶಿಕ್ಷಣ, ಸಾವಾಜಿಕ, ವ್ಯವಹಾರಿಕ ಕ್ಷೇತ್ರದಲ್ಲಿ ಸವಾನ ಅವಕಾಶ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಸಾಮೂಹಿಕ ಯೋಚನೆಗಳು ಹಿಂದು ಸವಾಜವನ್ನು ಒಂದೇ ಕಡೆ ಸೇರಿಸುವಂತೆ ವಾಡುತ್ತಿದೆ. ಕ್ಯಾ.ಬ್ರಿಜೇಶ್ ಚೌಟ, ಸಂಸದರು
ಕ್ಯಾ.ಬ್ರಿಜೇಶ್ ಚೌಟ, ಸಂಸದರು