ನಿವೃತ್ತ ಪೊಲೀಸ್​ ಅಧಿಕಾರಿಯ ಆತ್ಮಹತ್ಯೆ ಹಿಂದಿದೆ ಆ ಮಹಿಳೆ ಕೊಲೆಯ ರಹಸ್ಯ?

Hanumantappa-Rtd-DYSP
Published on

ಮಂಡ್ಯ: ಬೆಂಗಳೂರಿನ ವಿಜಯನಗರ ಎಂಸಿ ಲೇಔಟ್​ನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹನುಮಂತಪ್ಪ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದರು. ಬ್ಲಡ್ ಕ್ಯಾನ್ಸರ್​​ನಿಂದ ಬಳಲಿದ್ದ ಹನುಮಂತಪ್ಪ, ಆರೋಗ್ಯದ ವಿಚಾರವಾಗಿ ಮಾನಸಿಕ‌ ಖಿನ್ನತೆಗೆ ಒಳಗಾಗಿ ಸಾವಿನ ಕದ ತಟ್ಟಿದ್ದಾರೆ ಎಂದು ಹೇಳಲಾಗಿತ್ತಾದರೂ ಇದೀಗ ಎರಡು ತಿಂಗಳ ಹಿಂದೆ ಕೊಲೆಯಾಗಿದ್ದ ಮಹಿಳೆಯೊಬ್ಬರ ಕೇಸ್​ಗೂ ಈ ಸಾವಿಗೂ ಸಂಬಂಧವಿದೆ ಎನ್ನಲಾಗಿದೆ.

ಅ.28ರಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನಸಮುದ್ರದಲ್ಲಿ ಮೈಸೂರು ಮೂಲದ ಸರಸ್ವತಿ(45) ಎಂಬಾಕೆಯನ್ನು ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಸರಸ್ವತಿ ಮೈಸೂರಿನ ಎನ್‌.ಆರ್.ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಡಿ-ಗ್ರೂಪ್ ನೌಕರೆ ಆಗಿದ್ದಳು. ಹನುಮಂತಪ್ಪ ಮೈಸೂರಿನಲ್ಲಿ ಎಸಿಪಿ ಆಗಿ ಕೆಲಸ ಮಾಡುವಾಗ ಅವರ ಆಫೀಸ್​ನಲ್ಲೇ ಡಿ ಗ್ರೂಪ್ ನೌಕರೆಯಾಗಿ ಸರಸ್ವತಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿರಿ ರಾಜಕೀಯ ತುಂಬಾ ಕಷ್ಟ… ಎಂದ ಅಣ್ಣಾಮಲೈ!

ಸರಸ್ವತಿ ಕೊಲೆ ಕೇಸ್‌ನಲ್ಲಿ ಕಳೆದ ತಿಂಗಳು ಹನುಮಂತಪ್ಪರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಇತ್ತೀಚಿಗೆ ಮತ್ತೊಂದು ಬಾರಿ ವಿಚಾರಣೆಗೆ ಬರುವಂತೆ ಬೆಳಕವಾಡಿ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್‌ಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಹನುಮಂತಪ್ಪ ಮಾಗಡಿ ರಸ್ತೆ, ಬ್ಯಾಟರಾಯನಪುರ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಆಗಿದ್ದರು. ಯಶವಂತಪುರದಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಡಿವೈಎಸ್‌ಪಿ ಆಗಿ ನಿವೃತ್ತಿ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net