More

    ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

    ಚೆನ್ನೈ: ಕರೊನಾ ಬಿಕ್ಕಟ್ಟಿನ ನಡುವೆಯೂ 2020ನೇ ವರ್ಷದಲ್ಲಿ ಜನರು ಹೆಚ್ಚಾಗಿಒ ಖರೀದಿಸಿದ್ದು ಏನು ಗೊತ್ತಾ?

    ಕಾಂಡಂ ಜತೆಗೆ ತಂಬಾಕು ಅಥವಾ ಮಾದಕ ವಸ್ತು ಸೇವನೆಗೆ ಬಳಸುವ ರೋಲಿಂಗ್ ಪೇಪರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ ಎಂದು ಕನ್ಸೈರ್ಜ್ ಸರ್ವೀಸಸ್ ಅಪ್ಲಿಕೇಶನ್ ಡಂಜೊ ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ. ರಾತ್ರಿಗಿಂತ ಹಗಲು ವೇಳೆಯಲ್ಲೇ ಕಾಂಡಂ ಖರೀದಿಸುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆಯಂತೆ.

    ಶಾದ್ಯಂತ ಸರಾಸರಿ 3 ಪಟ್ಟು ಕಾಂಡಂ ಖರೀದಿ ಏರಿಕೆಯಾಗಿದೆ. ಹೈದರಾಬಾದ್​ನಲ್ಲಿ ಕಾಂಡಂ ಖರೀದಿಸುವ ಪ್ರಮಾಣ 6 ಪಟ್ಟು ಅಧಿಕವಾಗಿದ್ದು, ಚೆನೈ 5, ಜೈಪುರ 4, ಮುಂಬೈ ಮತ್ತು ಬೆಂಗಳೂರು ತಲಾ 3 ಪಟ್ಟು ಏರಿಕೆ ದಾಖಲಿಸಿವೆ. ಚೆನ್ನೈಗಿಂತ ಬೆಂಗಳೂರಿನ ಜನರು 22 ಪಟ್ಟು ಹೆಚ್ಚು ರೋಲಿಂಗ್ ಪೇಪರ್​ಗಳನ್ನು ಖರೀದಿಸಿದ್ದಾರೆ. ಇತರ ವಸ್ತುಗಳಲ್ಲಿ ತುರ್ತು ಗರ್ಭನಿರೋಧಕ ಮಾತ್ರಗಳ ಖರೀದಿಯಲ್ಲಿ ಬೆಂಗಳೂರು, ಪುಣೆ, ಗುರುಗ್ರಾಮ, ಹೈದರಾಬಾದ್ ಮತ್ತು ದೆಹಲಿ ಅಗ್ರಸ್ಥಾನದಲ್ಲಿವೆ. ಜೈಪುರದಲ್ಲಿ ಗರ್ಭಧಾರಣೆಯ ಪರೀಕ್ಷಾ ಕಿಟ್​ಗಳ ಖರೀದಿ ಪ್ರಮಾಣ ಹೆಚ್ಚಿದೆ.

    ಕಾಂಡಂ ಮತ್ತು ರೋಲಿಂಗ್​ ಪೇಪರ್​ಗಳ ಜತೆಗೆ ಬಿರಿಯಾನಿಗೂ ಡಿಮಾಂಡ್​ ಹೆಚ್ಚಾಗಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ವಿವಿಧ ಆಹಾರ ಸರಬರಾಜು ಆಪ್​ಗಳ ಮೂಲಕ ಆಹಾರ ಖರೀದಿ ಕೂಡ ಹೆಚ್ಚಳವಾಗಿದ್ದು, ಅದರಲ್ಲಿ ಬೆಂಗಳೂರಿನಲ್ಲಿ ಚಿಕನ್ ಬಿರಿಯಾನಿ ಅತಿ ಹೆಚ್ಚು ಆರ್ಡರ್ ಪಡೆದ ಆಹಾರ ಪದಾರ್ಥವಾಗಿದೆ. ಮಿಕ್ಕಂತೆ ಮುಂಬೈನವರು ದಾಲ್ ಖಿಚ್ಡಿ, ಚೆನ್ನೈನವರು ಇಡ್ಲಿ ಹಾಗೂ ಗುರುಗ್ರಾಮದವರು ಆಲೂ ಟಿಕ್ಕಿ ಬರ್ಗರ್ ಅನ್ನು ಹೆಚ್ಚು ಖರೀದಿಸಿದ್ದಾರೆ. ಪುಣೆಯ ಜನರು ಹೆಚ್ಚು ಮ್ಯಾಗಿ ಖರೀದಿಸಿದ್ದು, ದೆಹಲಿ, ಚೆನ್ನೈ ಮತ್ತು ಜೈಪುರದವರು ಕಾಫಿಯನ್ನು ಹೆಚ್ಚು ಆರ್ಡರ್ ಮಾಡಿದ್ದಾರೆ. ಪುಣೆ ಮತ್ತು ಹೈದರಾಬಾದ್​ನಲ್ಲಿ ಹೆಚ್ಚು ಖರೀದಿಸಲಾದ ಆಹಾರ ಸಾಮಾಗ್ರಿಯಲ್ಲಿ ಹಾಲು ಪ್ರಮುಖವಾಗಿದೆ. ದೆಹಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ತಂಪು ಪಾನೀಯಗಳನ್ನು ಖರೀದಿಸಿದ್ದಾರೆ ಎಂದು ವರದಿ ತಿಳಿಸಿದೆ. ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಮುಂಬೈನಲ್ಲಿ ಸಕ್ಕರೆಯ ಬದಲು ಬೆಲ್ಲವನ್ನು ಹೆಚ್ಚು ಬಳಸಲಾಗಿದೆ ಎಂದು ಅಧ್ಯಯನ ತಿಳಿಸಿದೆ.

    ಪ್ರೀತಿಯ ನಾಯಿಗೆ ಸ್ನಾನ ಮಾಡಿಸಲು ಹೋದ ಅಣ್ಣ-ತಂಗಿ ದುರ್ಮರಣ!

    ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

    ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts