ಆರ್‌ಎಸ್‌ಎಸ್‌ನಿಂದ ಸಹ ಭೋಜನ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಮೋಹ ತೊರೆದು, ಸನಾತನ ಧರ್ಮದ ಸಂಸ್ಕೃತಿಗೆ ಮಹತ್ವ ನೀಡಿ ನಮ್ಮ ಪದ್ಧತಿಗಳನ್ನು ಆಚರಣೆಗೆ ತಂದು ಬೆಳೆಸೋಣ ಎಂದು ಉತ್ತರ ಪ್ರಾಂತದ ಪ್ರಾಂತ ಶಾರೀರಿಕ ಪ್ರಮುಖ ದಯಾನಂದ ತಿಳಿಸಿದರು.
ನಗರದ ನೂತನ ವಿದ್ಯಾಲಯದ ಮೈದಾನದಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘ ನಗರದಿಂದ ಬುಧವಾರ ಆಯೋಜಿಸಿದ್ದ ಮಹಾ ಸಾಂಘಿಕ ಸಹ ಭೋಜನದಲ್ಲಿ ಮಾತನಾಡಿ, ನಮ್ಮ ಹಿರಿಯರ ಆಚರಣಾ ಪದ್ದತಿಗಳು ಒಂದೆರಡಲ್ಲ. ನೂರಾರು ಆಚರಣೆಗಳು, ಸನಾತನ ಪದ್ಧತಿಗಳು ಹಾಕಿಕೊಟ್ಟಿz್ದÁರೆ ಅವುಗಳನ್ನು ಉಳಿಸುವ ಕೆಲಸ ಎಲ್ಲರೂ ಮಾಡಬೇಕಿದೆ ಎಂದರು.
ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಹುಟ್ಟು ಹಬ ಆಚರಿಸುತ್ತೇವೆ. ಆದರೆ, ಆಚರಣೆ ಪದ್ಧತಿ ಎಂಥಾದ್ದು ಎಂಬ ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರತೀಕವಾದ ಕೇಕ್ ದೂರ ಮಾಡಿ, ದೀಪ ಬೆಳಗಿಸಿ ಜನ್ಮದಿನ ಆಚರಿಸೋಣ ಎಂದರು.
ರಾಷ್ಟಿçÃಯ ಸ್ವಯಂಸೇವಕ ಸಂಘ ನೂರು ವರ್ಷಗಳ ಹೊಸ್ತಿಲಲ್ಲಿ ನಿಂತ್ತಿದೆ. ೧೯೨೫ರಂದು ಡಾ.ಕೇಶವ ಬಲಿರಾಮ ಹೆಡಗೆವಾರ ಅವರಿಂದ ನಾಗಪುರದಲ್ಲಿ ಆರಂಭವಾದ ಸಂಘ ವಟವೃP್ಷÀದಂತೆ ಬೆಳೆದು ನಿಂತ್ತಿದೆ. ಸಂಘಕ್ಕೆ ಶತಮಾನ ಗತಿಸಿದರೂ ರಾಷ್ಟç ನಿರ್ಮಾಣದ ಕಾರ್ಯ ಬಿಟ್ಟಿಲ್ಲ. ಇಡೀ ಭಾರತ ದೇಶದ ೫೦ ಸಾವಿರ ಗ್ರಾಮಗಳಲ್ಲಿ ಸಂಘದ ಶಾಖೆ, ೩ ಲP್ಷÀ ಹಳ್ಳಿಗಳಿಗೆ ಸಂಘದ ಪತ್ರಿಕೆ, ಸಾವಿರಾರು ಸೇವಾ ಚಟುವಟಿಕೆಗಳು ಸಂಘದ ಅಡಿ ನಡೆಯುತ್ತಿವೆ ಎಂದರು.
ನಗರದ ನೂರಾರು ಜನರು ಸಹಭೋಜನ ಮಾಡಿದರು. ಆರ್‌ಎಸ್‌ಎಸ್ ಜಿಲ್ಲಾ ಸಂಘ ಚಾಲಕ ಅಶೋಕ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ನಾಗರಾಜ ಪಾಟೀಲ್, ನಗರ ಕಾರ್ಯವಾಹ ಸಂಜೀವ ಹುಲಿಮನಿ, ವಿಭಾಗ ಶಾರೀರಿಕ ಶಿP್ಷÀಣ ಪ್ರಮುಖ ಕಿರಣ ಸುವರ್ಣಕರ, ವಿಭಾಗ ಸಂಪರ್ಕ ಪ್ರಮುಖ ಸಾಗರ ಸತಳಕರ, ಮುರಳಿ ಪೂಜಾರ ಇತರರಿದ್ದರು.