

ಹನೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ ದೇಶಪ್ರೇಮವನ್ನು ಜಾಗೃತಿಗೊಳಿಸುತ್ತಿದೆ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ತಿಳಿಸಿದರು.
ಕಾಮಗೆರೆ ಗ್ರಾಮದ ಸ್ವ ಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದರು.
ಸ್ವಾತಂತ್ರೃ ಪೂರ್ವದಲ್ಲಿ ಆರಂಭವಾದ ಆರ್‌ಎಸ್‌ಎಸ್ ದೇಶದ ಅತಿ ದೊಡ್ಡ ಸಾಮಾಜಿಕ ಸಂಘಟನೆಯಾಗಿದ್ದು, ದೇಶ ಮೊದಲು ಎಂಬ ರಾಷ್ಟ್ರಭಾವವನ್ನು ಜಾಗೃತಿಗೊಳಿಸುತ್ತಿದೆ. ಜನರು ಒಗ್ಗೂಡಿಸುವಂತಹ ಕೆಲಸ ಮಾಡುತ್ತಿದೆ. ಇದೀಗ ಸಂಘಟನೆ 100 ವರ್ಷ ಪೂರೈಸಿರುವುದು ಸಂತಸದ ವಿಚಾರ ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಸ್ವಾಮಿ, ಜಿಲ್ಲಾ ಸಂಘಟನೆಯ ಸಹ ಪ್ರಚಾರಕ ವೇಣು, ಗ್ರಾಮ ವಿಕಾಸ ಸಂಚಾಲಕ ನಾಗೇಂದ್ರ, ಮಾಧ್ಯಮ ಸಂಚಾಲಕ ಮಧು, ಮುಖಂಡರಾದ ಮಾದೇವ, ನಾಗಭೂಷಣ್ ಹಾಗೂ ಇನ್ನಿತರರು ಇದ್ದರು.