

ಹರಿಹರ: ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ್ ಅದಾಲತ್‌ನಲ್ಲಿ 69450 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು 5,04,75,913 ರೂ. ಪರಿಹಾರ ಘೋಷಿಸಲಾಗಿದೆ.
ಹಿರಿಯ ಸಿವಿಲ್, ಪ್ರಧಾನ ಸಿವಿಲ್, 1 ಮತ್ತು 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ 2743 ಪ್ರಕರಣಗಳ ವಿಚಾರಣೆ ನಡೆದು 1429 ಪ್ರಕರಣಗಳನ್ನು ಇತ್ಯರ್ಥಪಡಿಸಿ 1,04,36,750 ರೂ. ಪರಿಹಾರ, ನ್ಯಾಯಾಲಯಗಳ ವ್ಯಾಜ್ಯ ಪೂರ್ವ 68,817 ಪ್ರಕರಣಗಳ ಪೈಕಿ 68,021 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ.4,00,39,163 ರೂ. ಪರಿಹಾರ ಘೋಷಿಸಲಾಯಿತು.
ಪ್ರಭಾರ ಪ್ರಧಾನ ಸಿವಿಲ್ ಹಾಗೂ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ವೀಣಾ ಕೋಳೆಕರ ಇವರು ಪ್ರಕರಣವೊಂದರಲ್ಲಿ ರಾಜಿ ಮೂಲಕ ದಂಪತಿಯನ್ನು ಒಂದುಗೂಡಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಪದ್ಮಶ್ರೀ ಮುನ್ನೋಳಿ, ಪ್ರಭಾರ ಪಧಾನ ಸಿವಿಲ್ ಹಾಗೂ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ವೀಣಾ ಕೋಳೆಕರ ಮತ್ತು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜ್ಯೋತಿ ಅಶೋಕ್ ಪತ್ತಾರ್ ಹಾಗೂ ಹಲವು ಹಿರಿಯ, ಕಿರಿಯ ವಕೀಲರು, ನ್ಯಾಯಾಲಯಗಳ ಸಿಬ್ಬಂದಿ ಭಾಗವಹಿಸಿದ್ದರು.