44.62 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

44.62 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ
Published on

ಅರಸೀಕೆರೆ: ನಗರಸಭೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಎಂ.ಸಮೀವುಲ್ಲ 2025-26ನೇ ಸಾಲಿನ 44.62 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.

ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ, ಬಾಡಿಗೆ, ಬಡಾವಣೆ ಅಭಿವದ್ಧಿ, ಜಾಹೀರಾತು, ಸರ್ಕಾರದ ಎಸ್‌ಎಫ್‌ಸಿ, ನಗರೋತ್ಥಾನ ಸೇರಿದಂತೆ ವಿವಿಧ ಮೂಲಗಳಿಂದ 79.85 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ನಗರ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ, ಕೊಳವೆ ಬಾವಿ ಕೊರೆಯಿಸುವುದು, ಹೈಮಾಸ್ಕ್ ಅಳವಡಿಕೆ, ನಗರಸಭೆ ಸಿಬ್ಬಂದಿ ವೇತನ, ವಾಣಿಜ್ಯ ಮಳಿಗೆಗಳ ನಿರ್ಮಾಣ ಒಳಗೊಂಡಂತೆ ಅಭಿವೃದ್ಧಿ ಕಾಮಗಾರಿಗಳಿಗೆ 79.40 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 44.62 ಲಕ್ಷ ರೂ.ಉಳಿತಾಯ ಬಜೆಟ್ ಮಂಡಿಸಲಾಗಿದ್ದು, ಅನುಮೋದನೆ ನೀಡುವಂತೆ ಸಭೆಯಲ್ಲಿ ಕೋರಿದರು. ಇದಲ್ಲದೆ ಅರಸೀ ಉದ್ಯಾನ ಅಭಿವೃದ್ಧಿ, ಈಜುಕೊಳ ನಿರ್ಮಾಣ, ನಗರ ಸೌಂದರ್ಯಕ್ಕೆ ಒತ್ತು ನೀಡುವುದು, ಹಿಂದು ರುದ್ರಭೂಮಿ ಆಧುನೀಕರಣ, ಕಂತೇನಹಳ್ಳಿ ಕೆರೆಯಲ್ಲಿ ದೋಣಿವಿಹಾರ, ನಗರದ ನಾಲ್ಕು ದಿಕ್ಕಿನಲ್ಲಿಯೂ ಹೊಸ ನಾಮಫಲಕಗಳನ್ನು ಅಳವಡಿಸುವುದು ಸೇರಿದಂತೆ ಜನಪರ ಹಾಗೂ ಅಭಿವೃದ್ಧಿಪರ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ಆಯವ್ಯಯದ ಪ್ರತಿ ಪರಿಶೀಲಿಸಿದ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net