11 ಲಕ್ಷ ರೂ. ಕಾಳಧನ ವಶ, ಓರ್ವ ಬಂಧನ

Arrest
Published on

ಕಾಸರಗೋಡು: ನೀಲೇಶ್ವರ ಠಾಣೆ ಎಸ್‌ಐ ರತೀಶ್ ನೇತೃತ್ವದ ಪೊಲೀಸರ ತಂಡ ಪಳ್ಳಿಕೆರೆ ಮೇಲ್ಸೇತುವೆ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 11 ಲಕ್ಷ ರೂ. ಕಾಳಧನ ವಶಪಡಿಸಿಕೊಂಡು, ಒಬ್ಬನನ್ನು ಬಂಧಿಸಿದ್ದಾರೆ. ಪಡನ್ನ ಕೊಕ್ಕಕಡವು ನಿವಾಸಿ ಎಸ್.ಸಿ.ನಿಸಾರ್ ಬಂಧಿತ. ಕಾಳಧನ ಸಾಗಿಸುತ್ತಿರುವ ಬಗ್ಗೆ ಲಭಿಸಿದ ರಹಸ್ಯ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಕಾಳಧನ ಸಾಗಾಟಕ್ಕೆ ಬಳಸಿದ್ದ ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net