

ಗುರುಪುರ: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ 16ನೇ ಕ್ಷೇತ್ರ, ಮಣೇಲ್(ಮಳಲಿ) ಶ್ರೀ ಸೂರ್ಯನಾರಾಯಣ ದೇವಸ್ಥಾನವಾಗಿದೆ. ಕ್ಷೇತ್ರ ವ್ಯಾಪ್ತಿಯ ಇನ್ನೂ 2 ಕ್ಷೇತ್ರಗಳು ಜೀರ್ಣೋದ್ಧಾರಗೊಳ್ಳಲಿದ್ದು, 18 ಕ್ಷೇತ್ರಗಳಲ್ಲಿ ದೇವರ ಸೇವೆ ಮಾಡುವ ಭಾಗ್ಯ ಸಿಕ್ಕಿದೆ. ಈಗಾಗಲೇ ದೇವಸ್ಥಾನ ಅಭಿವೃದ್ಧಿಗೆ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಮುಂದೆಯೂ ಸಹಕಾರ ನೀಡುವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಮಳಲಿ ದೇವರಗುಡ್ಡೆ ಶ್ರೀ ಸೂರ್ಯನಾರಾಯಣ ದೇವಸ್ಥಾನ ಪುನಃನಿರ್ಮಾಣ ಪ್ರಯುಕ್ತ ದೇವರಗುಡ್ಡೆಯಲ್ಲಿ ಭಾನುವಾರ ಜೀರ್ಣೋದ್ಧಾರ ಸಮಿತಿ ರಚನೆ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ಮಹೇಶ್ ಶೆಟ್ಟಿ ಮೊಗರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಇತಿಹಾಸ ವಿವರಿಸಿದರು. ಹಿರಿಯರಾದ ಅಣ್ಣಯ್ಯ ಎಂ., ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ, ಧಾರ್ಮಿಕ ಮುಖಂಡ ಚಂದ್ರಹಾಸ ಶೆಟ್ಟಿ ನಾರಳ, ಉದಯ ಆಳ್ವ ಉಳಿಪಾಡಿಗುತ್ತು, ವಾಮನ ನಾಯಕ್ ಪೊಳಲಿ, ಶೇಖರ್ ಜೋಗಿ, ಅಕ್ಷಯ್ ಕುಮಾರ್, ಉಲ್ಲಾಸ್ ರೈ, ಪ್ರಶಾಂತ್ ಕುಮಾರ್ ಕಟ್ಟೆಮಾರ್, ಚಂದ್ರಹಾಸ ಪಳ್ಳಿಪಾಡಿ ಮತ್ತಿತರರು ಇದ್ದರು.