ಪಶುಭಾಗ್ಯ ಯೋಜನೆಯಡಿ 1.80 ಲಕ್ಷ ರೂ. ಸಹಾಯಧನ

12 KKP 4
Published on

ಬಮುಲ್​ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮಾಹಿತಿ

ಕನಕಪುರ: ರೈತರು ಕೃಷಿ ಜತೆ ಹೈನುಗಾರಿಕೆ ನಡೆಸಲು ಅನುಕೂಲವಾಗುವಂತೆ ಉತ್ತಮ ತಳಿಯ ಎರಡು ಹಸುಗಳ ಖರೀದಿಗೆ ಬಿಡಿಸಿಸಿ ಬ್ಯಾಂಕ್​ನಿಂದ ಪಶು ಭಾಗ್ಯ ಯೋಜನೆಯಡಿ 1.80 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್​ ಹೇಳಿದರು.

ಇಲ್ಲಿನ ಅಂಬೇಡ್ಕರ್​ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಡಿಸಿಸಿ ಬ್ಯಾಂಕ್​ನಿಂದ ರೈತರಿಗೆ ಸಾಲ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಲಾಭ ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರ ಸಹಕಾರ ೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಅದರಲ್ಲೂ ಕಾಂಗ್ರೆಸ್​ ಸರ್ಕಾರ ರಕ್ರಾಂತಿ ಪ್ರಾರಂಭಿಸಿದ ಫಲವಾಗಿ ಸಣ್ಣ ರೈತರು, ಕೃಷಿ ಕಾರ್ಮಿಕರಿಗೆ ಹೈನುಗಾರಿಕೆಯಿಂದ ಅನುಕೂಲವಾಗುತ್ತಿದೆ. ಇದಕ್ಕೆ ಮತ್ತಷ್ಟು ಬಲ ತುಂಬುವ ಕಾರ್ಯವನ್ನು ಬಮುಲ್​ ಮಾಡುತ್ತಿದೆ. ಮಳೆ ಕೈ ಕೊಟ್ಟು ಬಲಗಾಲದಿಂದ ರೈತರು ಕಂಗಾಲಾಗಿದ್ದರು. ಕೃಷಿಯ ಜತೆಗೆ ಹೈನುಗಾರಿಕೆ ರೈತರ ಜೀವನಾಡಿಯಾಗಿದೆ. ರೈತರು ಹೈನುಗಾರಿಕೆಯಿಂದ ಹೆಚ್ಚಿನ ಆದಾಯ ಪಡೆಯಬಹುದು ಎಂದರು.

ಒಂದು ಹಸು ಹಾಲು ಕೊಡುವ ವೇಳೆ ಮತ್ತೊಂದು ಹಸುವನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ನೀಡಲಾಗುತ್ತಿದೆ. ಈ ಎರಡೂ ಹಸುಗಳಿಂದ ಹೈನುಗಾರಿಕೆಯಲ್ಲಿ ಪ್ರಗತಿ ಕಾಣುವ ಜತೆಗೆ ಸಂದಲ್ಲಿ ಅತಿ ಹೆಚ್ಚು ಹಾಲು ಪೂರೈಕೆ ಮಾಡುವ ಸದಸ್ಯರ ಮಕ್ಕಳಿಗೆ ಬಮುಲ್​ನಲ್ಲಿ ಉದ್ಯೋಗಾವಕಾಶ ನೀಡುವ ಯೋಜನೆ ಕೈಗೊಂಡಿದ್ದೇವೆ. ಆದ್ದರಿಂದ ರೈತರು ಗುಣಮಟ್ಟದ ಹಾಲು ನೀಡುವ ಮೂಲಕ ಒಕ್ಕೂಟದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ವಿಧಾನ ಪರಿಷತ್​ ಸದಸ್ಯ ಎಸ್​.ರವಿ ಹಾಗೂ ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ಎಂ.ಡಿ.ವಿಜಯದೇವ್​, ಬಿಡಿಸಿಸಿ ಬ್ಯಾಂಕ್​ ಡಿ.ಜಿ.ಎಂ.ಸುರೇಶ್​, ಕನಕಪುರ ಶಾಖೆ ವ್ಯವಸ್ಥಾಪಕ ಕಿರಣ್​ಕುಮಾರ್​, ಆನಂದ್​, ದೊಡ್ಡ ಆಲಹಳ್ಳಿ ಶಾಖೆ ವಿಜಯ್​, ಸಾತನೂರು ಶಾಖೆ ರವಿ ಪ್ರಸಾದ್​, ಕೋಡಿಹಳ್ಳಿ ಮೇಲ್ವಿಚಾರಕ ಕುಮಾರ್​, ನಿರ್ದೇಶಕ ಧನಂಜಯ್ಯ, ನಾಗರಾಜು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net