ಆರ್​ ಆರ್​ ನಗರ, ಶಿರಾದಲ್ಲಿ ಕಾಂಗ್ರೆಸ್​ ಸೋಲಿಗೆ ಪ್ರಮುಖ ಕಾರಣ ಇಲ್ಲಿದೆ...

KUSUMA- JAYACHANDRA
Published on

ಬೆಂಗಳೂರು: ಆರ್​ ಆರ್​ ನಗರ ಮತ್ತು ಶಿರಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಕಂಡಿದೆ. ಈ ಕುರಿತು ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಪಕ್ಷದ ಅಧ್ಯಕ್ಷನಾಗಿ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಹೊರತು, ಬೇರೆಯವರ ಮೇಲೆ ಹಾಕುವುದಿಲ್ಲ. ಎರಡೂ ಕ್ಷೇತ್ರದ ಮತದಾರ ಕೊಟ್ಟ ತೀರ್ಪನ್ನು ಗೌರವಯುತವಾಗಿ ಒಪ್ಪುತ್ತೇವೆ ಎಂದಿದ್ದಾರೆ. ಆದರೂ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಾಂಗ್ರೆಸ್​ ಸೋಲಿಗೆ ಕಾರಣ ಏನೆಂದು ಚರ್ಚೆಗಳು ಶುರುವಾಗಿವೆ.

ಎರಡೂ ಕಡೆ ಸೋಲುವುದಕ್ಕೆ ಕೈ ಆಂತರಿಕ ಕಚ್ಚಾಟ ಮತ್ತು ಮುಂದಿನ ಸಿಎಂ ಅಭ್ಯರ್ಥಿ ಗೊಂದಲ ಹೇಳಿಕೆಗಳೇ ಸೋಲಿಗೆ ಕಾರಣ ಎನ್ನಲಾಗಿದೆ.

ಹೋದ ಕಡೆಯಲ್ಲೆಲ್ಲ ಒಗ್ಗಟ್ಟು ಜಪಿಸದೆ ಸಿದ್ದು-ಡಿಕೆ ಅಂತ ಕಾರ್ಯಕರ್ತರು ಕೂಗಿದ್ದರು. ಆರ್ ಆರ್ ನಗರದಲ್ಲಿ ಡಿಕೆ ಸಹೋದರರ ಚುನಾವಣೆ ಅಂತ ಬಿಂಬಿಸಿಕೊಂಡಿದ್ದು, ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಎಲ್ಲ ಹಂತಗಳಲ್ಲೂ ಏಕವ್ಯಕ್ತಿ ನಿರ್ಧಾರ ಕೈಗೊಂಡಿದ್ದರ ಪರಿಣಾಮ ಉಪಸಮರದಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಕಾಣುವಂತಾಯಿತು ಎಂದು ಅಸಮಾಧಾನಿತ ಚರ್ಚೆಗಳು ಶುರುವಾಗಿದೆ. ಹಿರಿಯ ನಾಯಕರನ್ನು ಕೆಪಿಸಿಸಿ ಪರಿಗಣಿಸಲಿಲ್ಲ ಎಂಬ ಟೀಕೆಯೂ ಕೇಳಿಬಂದಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net