ರಾಯಲ್ ಫ್ರೆಂಡ್ಸ್ ತಂಡ ಪ್ರಥಮ

04mdk05
ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಸ್ವೀಕರಿಸಿದ ಕುಶಾಲನಗರದ ರಾಯಲ್ ಫ್ರೆಂಡ್ಸ್ ತಂಡ.
Published on

ಕುಶಾಲನಗರ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಶಾಲನಗರದ ರಾಯಲ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು.

ಮದಲಾಪುರದ ಬಿವೈಸಿ ತಂಡ ದ್ವಿತೀಯ ಸ್ಥಾನ, ಕೂಡುಮಂಗಳೂರು ಶಿವಾಜಿ ಫ್ರೆಂಡ್ಸ್ ತೃತೀಯ ಸ್ಧಾನ ಹಾಗೂ ಹೆಬ್ಬಾಲೆಯ ಬನಶಂಕರಿ ತಂಡ ನಾಲ್ಕನೇ ಸ್ಥಾನ ಪಡೆಯಿತು.

ಕಬಡ್ಡಿ ಪಂದ್ಯಾವಳಿಯಲ್ಲಿ ಬ್ಯಾಡಗೊಟ್ಟ ಫ್ರೆಂಡ್ಸ್ ತಂಡ ಪ್ರಥಮ, ಹುದುಗೂರು ಕಾಳಿಕಾಂಬಾ ದ್ವಿತೀಯ ಸ್ಧಾನ ಪಡೆಯಿತು. ಮಹಿಳೆಯರ ವಿಭಾಗದ ಥ್ರೋ ಬಾಲ್ ಪಂದ್ಯಾಟದಲ್ಲಿ ಕರಾಟೆ ಕಿಂಡ್ಸ್ ತಂಡ ಪ್ರಥಮ, ಹುದುಗೂರು ಕಾಳಿಕಾಂಬಾ ದ್ವಿತೀಯ ಸ್ಧಾನ ಪಡೆದವು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಕಾಳಿಕಾಂಬಾ ಯುವಕ ಸಂಘದ ಅಧ್ಯಕ್ಷ ಐ.ಜಿ. ಶರತ್ ಬಹುಮಾನ ವಿತರಣೆ ಮಾಡಿದರು.

ಇದೇ ವೇಳೆ ನಡೆದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ತಂಡದವರು ಅತ್ಯಾಕರ್ಷಕ ನೃತ್ಯ ಹಾಗೂ ಗಾಯನ ಪ್ರೇಕ್ಷಕರ ಮೋಡಿ ಮಾಡಿತು.

ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತ ಬಿ.ಎಲ್. ಸುರೇಶ್, ಅಭಿಮನ್ಯು ಆನೆ ಮಾವುತ ಐ.ಎಸ್.ವಸಂತ, ಭೀಮ್ ಹನುಮ ಸೇವಾ ಸಮಿತಿ ಅಧ್ಯಕ್ಷ ಸಜನ್ ಕಿಶೋರ್, ಹುದುಗೂರು ಗ್ರಾಮದ ಹಿರಿಯರಾದ ಟಿ. ಪಿ.ಪೂವಯ್ಯ, ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿ ಉಪಾಧ್ಯಕ್ಷ ಎನ್.ಎಸ್.ಮುತ್ತಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net