ಉಚ್ಚೆ ಮಂಜನ ಕೊಲೆ ಪ್ರಕರಣದ ಆರೋಪಿ ಕಾಲಿಗೆ ಗುಂಡೇಟು, ಎಎಸ್​ಐಗೂ ಗಾಯ

Accused
Published on

ತುಮಕೂರು: ಇತ್ತೀಚೆಗೆ ನೆಡೆದ RXಮಂಜ ಅಲಿಯಾಸ್​ ಉಚ್ಚೆ ಮಂಜನ ಕೊಲೆ ಪ್ರಕರಣದ ಆರೋಪಿಯನ್ನು ಕಾಲಿಗೆ ಗುಂಡು ಹಾರಿಸಿ ಭಾನುವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ತಾಲೂಕು ಅಜ್ಜಪ್ಪನಹಳ್ಲಿಯ ಸಮುದಾಯ ಭವನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಗುಬ್ಬಿ ತಾಲೂಕಿನ ಗೌರಿಪುರದ ವಿಕಾಸ್ ಅಲಿಯಾಸ್ RX ವಿಕ್ಕಿ (24)ಯನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಆತ ಮುಂದಾದಾಗ ತಿಲಕ್ ಪಾರ್ಕ್ ಠಾಣೆ ಪಿಎಸ್ ಐ ನವೀನ್ ಗುಂಡು ಹಾರಿಸಿದ್ದಾರೆ.

ಆರೋಪಿ ವಿಕ್ಕಿ ಹಾಗೂ ಎಡಕೈ ತೋಳಿಗೆ ಗಾಯಗೊಂಡಿರುವ ಎಎಸ್ ಐ ಪರಮೇಶ್ವರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net