VIDEO| ಲವ್​ ಮಾಡಿದ್ದಕ್ಕೆ ಹುಡುಗನ ಮೇಲೆ ಪುಡಿ ರೌಡಿಗಳ ಅಟ್ಟಹಾಸ: ಪಾರ್ಕ್​ಗೆ ಕರೆದೊಯ್ದು ಥಳಿತ

Assault on boy
Published on

ಕಲಬುರಗಿ: ಹುಡುಗಿಯ ವಿಚಾರಕ್ಕೆ ಹುಡುಗನೊಬ್ಬನಿಗೆ ಪುಡಿ ರೌಡಿಗಳ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಳೆದ ಜನವರಿಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಲಬುರಗಿ ನಗರದ ಹುಡುಗಿಯನ್ನು ಲವ್ ಮಾಡಿದ್ದಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭಿಮನಗೌಡ ಎಂಬುವನನ್ನು ಪುಡಿ ರೌಡಿಗಳು ಥಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ತಮ್ಮಣ್ಣ ಕುಟುಂಬಕ್ಕೆ ಕಂಟಕ

ಕಲಬುರಗಿ ನಗರದ ಪಾರ್ಕ್​ಗೆ ಕರೆದುಕೊಂಡು ಹೋಗಿ ಕೈ ಮಾಡಿದ್ದಲ್ಲದೆ, ಕೋಲುಗಳಿಂದ ಮನಬಂದಂತೆ ಬಡಿದಿದ್ದಾರೆ. ಕಲಬುರಗಿಯ ನಿವಾಸಿ ಅಮರ್ ಮತ್ತು ಆತನ‌ ಗ್ಯಾಂಗ್​ನಿಂದ‌ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದ್ದು, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net