ರೋಟರಿ ಕಾರ್ಯ ಸ್ತುತ್ಯರ್ಹ: ವಾದಿರಾಜ ಉಪಾಧ್ಯಾಯ ಹೇಳಿಕೆ

Mul_Ambulance
Published on

ಮೂಲ್ಕಿ: ಸಮಾನತೆ ಮತ್ತು ಸಹಬಾಳ್ವೆಯ ಮೂಲ ತತ್ವಗಳನ್ನು ಬುನಾದಿಯಾಗಿಸಿ ಸಮಾಜದ ದೀನ ವರ್ಗಕ್ಕೆ ಉಪಕಾರಿಯಾಗುವ ಯೋಜನೆಗಳನ್ನು ನೀಡುವ ರೋಟರಿ ಕಾರ್ಯ ಸ್ತುತ್ಯರ್ಹ ಎಂದು ಹಿರಿಯ ವಾಗ್ಮಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಹೇಳಿದರು.

ಮೂಲ್ಕಿ ರೋಟರಿ ಕ್ಲಬ್​ ಆಶ್ರಯದಲ್ಲಿ ಎಂಆರ್​ಪಿಎಲ್​ ಪ್ರಾಯೋಜಕತ್ವದ ಆಂಬುಲೆನ್ಸ್​ ಲೋಕಾರ್ಪಣೆ ಬಳಿಕ ರೋಟರಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಂಬುಲೆನ್ಸ್​ ಲೋಕಾರ್ಪಣೆಗೈದು ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್​ ವಿಕ್ರಮ್​ ದತ್ತಾ, ರೋಟರಿ ವಿವಿಧ ೇತ್ರಗಳಲ್ಲಿ ಸೇವಾ ಕಾರ್ಯ ನೀಡುವ ಮೂಲಕ ವಿಶ್ವದಲ್ಲಿ ಅದ್ವೀತಿಯ ಸಂಸ್ಥೆಯಾಗಿ ಬೆಳೆದಿದ್ದು, ಮೂಲ್ಕಿ ರೋಟರಿ ಉತ್ತಮ ಸೇವೆಗಳನ್ನು ಮಾಡುತ್ತಾ ಎಲ್ಲರ ಗಮನ ಸೆಳೆದಿದೆ ಎಂದರು.

ಮೂಲ್ಕಿ ರೋಟರಿ ಕ್ಲಬ್​ ಅಧ್ಯಕ್ಷ ಪ್ರೀತಮ್​ ಕುಮಾರ್​ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಚರ್ಚ್​ ಧರ್ಮಗುರು ಆಂಟನಿ ಶೇರಾ, ಕಾರ್ನಾಡು ಮಸೀದಿ ಧರ್ಮಗುರು ಅಲ್ಹಾಜ್​ ಇಸ್ಮಾಯಿಲ್​ ದಾರಿಮಿ, ಎಂಆರ್​ಪಿಎಲ್​ನ ಎಚ್​ಆರ್​ ವಿಭಾಗದ ಅಧಿಕಾರಿ ಸ್ಟೀವನ್​ ಪಿಂಟೋ ಎಂ., ರೋಟರಿ ಸಹಾಯಕ ಗವರ್ನರ್​ ಶರತ್​ ಶೆಟ್ಟಿ, ಮೂಲ್ಕಿ ನಪಂ ಅಧ್ಯಕ್ಷ ಸತೀಶ್​ ಅಂಚನ್​, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್​ ಶೆಟ್ಟಿ ಜಿ.ಎಂ., ಸಮುದಾಯ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ.ಕೃಷ್ಣ, ಟೂರಿಸ್ಟ್​ ಕಾರು ಮತ್ತು ಟೆಂಪೋ ಚಾಲಕರ ಸಂದ ಅಧ್ಯಕ್ಷ ಪ್ರಕಾಶ್​ ಶೆಣೈ, ಮೂಲ್ಕಿ ರೋಟರಿ ಕಾರ್ಯದರ್ಶಿ ಜೇಮ್ಸ್​ ಪೀಟರ್​ ಡಿಸೋಜ, ಸಮುದಾಯ ಸೇವಾ ಅಧ್ಯೆ ಭಾನುಮತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿನರಾಜ್​ ಸಾಲ್ಯಾನ್​ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net