ರೋಟರಿ ಸೇವಾ ಕಾರ್ಯಗಳ ಅವಲೋಕನ

New Project (12)
Published on

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ 2024-25ನೇ ಸಾಲಿನಲ್ಲಿ ಪೂರನ್ ವರ್ಮ ಅಧ್ಯಕ್ಷತೆಯಲ್ಲಿ ರೋಟರಿ ವರ್ಷದಲ್ಲಿ ಉತ್ತಮ ಸಾಧನೆಗಳನ್ನು ಮಾಡಿದ್ದು, ಅವಲೋಕನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಉಜಿರೆಯ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು.

ರಾಷ್ಟ್ರಮಟ್ಟದ ಕ್ರೀಡಾ ಪ್ರತಿಭೆ ಚಂದ್ರಿಕಾ, ಬೆಳ್ತಂಗಡಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಸುಕುಮಾರ್ ಜೈನ್, ನಿಡ್ಲೆ ಆಗ್ರಿಲೀಫ್‌ನ ನಿರ್ದೇಶಕರಾದ ಅವಿನಾಶ್ ರಾವ್ ಮತ್ತು ಅತಿಶಯ್ ಜೈನ್, ಉಜಿರೆ ಕೆ.ರಾಮಚಂದ್ರ ಶೆಟ್ಟಿ, ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ, ವ್ಯಂಗ್ಯಚಿತ್ರಗಾರ ಶೈಲೇಶ್ ಕುಮಾರ್, ಎಸ್.ಡಿ.ಎಂ ಸಂಸ್ಕೃತಿ ಮತ್ತು ಸಂಶೋಧನಾ ಪ್ರತಿಷ್ಠಾನದ ಡಾ.ಎಸ್.ಆರ್.ವ್ನಿರಾಜ್, ಉಜಿರೆಯ ಛಾಯಾಗ್ರಾಹಕ ಸಂದೀಪ್ ಹೊಳ್ಳ, ಮಂಜುಶ್ರೀ ಪಿಂಟರ್ಸ್‌ನ ಮ್ಯಾನೇಜರ್ ಶೇಖರ್ ಅವರನ್ನು ರೋಟರಿ ಕ್ಲಬ್ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ಅವರನ್ನು ಗೌರವಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಕಾರ್ಯದರ್ಶಿ ಸಂದೇಶ್ ರಾವ್, ಸೋನಿಯ ವರ್ಮ ಪ್ರಶಸ್ತಿ ಪ್ರದಾನ ಮಾಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ಬಿ.ಕೆ.ಧನಂಜಯ ರಾವ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net