

ಸೋಮವಾರಪೇಟೆ: ನೀಟ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 84ನೇ ಸ್ಥಾನ, ರಾಜ್ಯಮಟ್ಟದಲ್ಲಿ 7ನೇ ಸ್ಥಾನ ಪಡೆದ ಸೋಮವಾರಪೇಟೆಯ ಚೌಡ್ಲು ಗ್ರಾಮ ನಿವಾಸಿ ಕೆ.ಜಿ.ನಿಧಿ ಅವರನ್ನು ರೋಟರಿ ಸೋಮವಾರಪೇಟೆ ಹಿಲ್ಸ್ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ನಡೆಯಿತು. ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷೆ ವೀಣಾ ಮನೋಹರ್ ಸನ್ಮಾನಿಸಿದರು. ಮಡಿಕೇರಿ ಡಿಎಆರ್ ನಲ್ಲಿ ಎಎಸ್‌ಐ ಗಣಪತಿ ಹಾಗೂ ಜಕ್ಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗುಣವತಿ ಅವರ ಪುತ್ರಿ.
ನಿಯೋಜಿತ ಜಿಲ್ಲಾ ಪ್ರಾಂತಪಾಲ ಸತೀಶ್ ಬೋಳಾರ್, ಸಹಾಯಕ ಪ್ರಾಂತಪಾಲ ಡಾ. ಹರಿ.ಎ.ಶೆಟ್ಟಿ, ನಿಯೋಜಿತ ಸಹಾಯಕ ರಾಜ್ಯಪಾಲ ಉಲ್ಲಾಸ್ ಕೃಷ್ಣ, ವಲಯ ಸೇನಾನಿ ಎಂ.ಎಂ. ಪ್ರಕಾಶ್ ಕುಮಾರ್, ಮಾಜಿ ಅಧ್ಯಕ್ಷ ಜೆ.ಕೆ.ಪೊನ್ನಪ್ಪ ಸೇರಿದಂತೆ ಪದಾಧಿಕಾರಿಗಳು ಇದ್ದರು.