

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಆನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ವಿಶ್ವ ಛಾಯಾಗ್ರಹಣ ದಿನವನ್ನು ಉಜಿರೆಯ ರಶ್ಮೀ ಫೋಟೋ ಸ್ಟುಡಿಯೋದಲ್ಲಿ ಆಚರಿಸಲಾಯಿತು.
ಛಾಯಾಗ್ರಾಹಕನಾಗಿ 5 ವಷರ್ಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ರಾಮಕೃಷ್ಣ ರೈ ಅವರನ್ನು ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಆನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಗೌರವಿಸಲಾಯಿತು.
ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ರೋಟೆರಿಯನ್ ಶ್ರೀಧರ ಕೆ.ವಿ., ರೋಟೆರಿಯನ್ ಪ್ರಶಾಂತ ಜೈನ್ ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ಡಾ.ವಿನಯಾ ಕಿಶೋರ್, ಡಾ.ಭಾರತಿ ಜಿ.ಕೆ.ಹಾಗೂ ಪುನೀತಾ ಪ್ರಭಾಕರ್ ಅವರು ಉಪಸ್ಥಿತರಿದ್ದರು.