ರೋಟರಿ ಕ್ಲಬ್ ಅಂತಾರಾಷ್ಟ್ರೀಯ ಮಹಿಳಾ ದಿನ

6
Published on

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಅಂಗ ಸಂಸ್ಥೆ ಆನ್ಸ್ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಇತ್ತೀಚೆಗೆ ಆಚರಿಸಲಾಯಿತು. ಬೆಳ್ತಂಗಡಿ ಪರಿಸರದ 3 ಜನ ಮಹಿಳಾ ಸಾಧಕರನ್ನು ಅಭಿನಂದಿಸಲಾಯಿತು. ಉರಗ ರಕ್ಷಕಿ ಶೋಭಾ, ಬೆಳ್ತಂಗಡಿ ಮಹಿಳಾ ಮಂಡಲಗಳ ಗೌರವ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಜಿಲ್ಲಾ ಉತ್ತಮ ಮಹಿಳಾ ಕೃಷಿಕೆ ಪ್ರಶಸ್ತಿ ಸ್ವೀಕರಿಸಿರುವ ಜಯಶ್ರೀ ಪ್ರಕಾಶ್ ಅವರನ್ನು ಗೌರವಿಸಲಾಯಿತು.

ಬೆಳ್ತಂಗಡಿ ರೋಟರಿ ಕ್ಲಬ್ ನಿಕಟಪೂರ್ವ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಅಧ್ಯಕ್ಷತೆ ವಹಿಸಿದ್ದರು. ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ಡಾ.ವಿನಯ ಕಿಶೋರ್, ರೋಟರಿ ಕ್ಲಬ್ ಸದಸ್ಯರಾದ ಅನಂತ್ ಭಟ್, ಪ್ರವೀಣ್ ಗೋರೆ, ಶ್ರೀಕಾಂತ್, ಪ್ರಕಾಶ್ ಪ್ರಭಕ ಮತ್ತು ಆನ್ಸ್ ಡಾ.ಭಾರತಿ, ಗೀತಾ ಪ್ರಭು ಉಪಸ್ಥಿತರಿದ್ದರು. ಮನೋರಮಾ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net