ಹಂಚಿ ತಿಂದಾಗ ಆನಂದ ಅನಿರ್ವಚನೀಯ : ಭಸ್ಮಾಜೆ ಸುಬ್ರಹ್ಮಣ್ಯ ಭಟ್ ಬಣ್ಣನೆ

New Project (5)
Published on

ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಪ್ರಾಥಮಿಕ ವಿದ್ಯಾರ್ಥಿಗಳ ಆಹಾರೋತ್ಸವ ಬುಧವಾರ ಜರುಗಿತು.

ನಿವೃತ್ತ ಶಿಕ್ಷಕ ಭಸ್ಮಾಜೆ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿ ಮಾತನಾಡಿ, ಮನೆಯವರ ಸಹಾಯದೊಂದಿಗೆ ತಯಾರು ಮಾಡಿದ ತಿಂಡಿ ತಿನಿಸು ಶಾಲೆಯಲ್ಲಿ ಎಲ್ಲರ ಜತೆ ಹಂಚಿ ತಿನ್ನುವ ಆನಂದ ಅನಿರ್ವಚನೀಯ ಎಂದರು.

ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಮಾತನಾಡಿದರು. ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಹಾಗೂ ಶಿಕ್ಷಕ ವೃಂದದ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಹಣ್ಣುಹಂಪಲು ಉಣಬಡಿಸಲಾಯಿತು. ಲಡ್ಡು, ಕೇಸರಿಬಾತ್, ಹಲ್ವಾ, ತೆಂಗಿನಕಾಯಿ ಬರ್ಫಿ, ರಾಗಿ ಹಲ್ವಾ, ಖರ್ಜೂರ ಹಲ್ವಾ ಮುಂತಾದ 40 ಬಗೆಯ ಸಿಹಿತಿನಿಸುಗಳು ಹಾಗೂ 34 ವಿವಿಧ ಬಗೆಯ ಕರಿದ ಖಾದ್ಯಗಳು, ಬೆಂಕಿಯನ್ನು ಬಳಸದೆ ಸ್ವತಃ ಮಕ್ಕಳೇ ತಯಾರಿಸಿದ ತರಕಾರಿ ಸಲಾಡ್, ಮೊಳಕೆ ಬರಿಸಿದ ಕಾಳುಗಳ ಸಲಾಡ್, ಚುರುಮುರಿ ಮುಂತಾದ 12 ವಿಧದ ತಿನಿಸುಗಳು. ಉಣ್ಣಿ ಅಪ್ಪ, ಚಪಾತಿ, ಪೂರಿ ಮುಂತಾದ 10 ತಿನಿಸುಗಳು ಸೇರಿ 96 ತಿನಿಸುಗಳು ಪ್ರದರ್ಶನಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net