ಕೊರಗಜ್ಜ ಪಾಲ್ತಾಡಿ, ಕೊಡಿಯಾಲ ತಂಡ ಪ್ರಥಮ

Published on

ನಾಪೋಕ್ಲು: ಸಂಪಾಜೆಯ ಮಹಾವಿಷ್ಣು ಮಿತ್ರ ಬಳಗದ ವತಿಯಿಂದ ದೀಪಾವಳಿ ಕ್ರೀಡಾಕೂಟದ ಅಂಗವಾಗಿ ಆಯೋಜಿಸಿದ್ದ ಪುರುಷರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸ್ವಾಮಿ ಕೊರಗಜ್ಜ ಪಾಲ್ತಾಡಿ ತಂಡ ಪ್ರಥಮ ಸ್ಥಾನ ಪಡೆಯಿತು.


ಸಂಪಾಜೆಯ ವಿಷ್ಣು ಬಳಗ ತಂಡ ದ್ವಿತೀಯ ಸ್ಥಾನ ಗಳಿಸಿತು. ಓಂ ಪ್ಲಠ್ಛ್ಛ ಸ್ಟ್ಟಾರ್ ಮಲ್ಲರ್ ಮೂರನೇ ಸ್ಥಾನ, ಆದರ್ಶ ಕೆಡವು ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಕೊಡಿಯಾಲ ತಂಡವು ಪ್ರಥಮ ಸ್ಥಾನ, ಆದರ್ಶ ಕೆಡವು ತಂಡವು ದ್ವಿತೀಯ ಸ್ಥಾನ ಗಳಿಸಿತು.


ಪುರುಷರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕೊರಗಜ್ಜ ಪಾಲ್ತಾಡಿ ತಂಡಕ್ಕೆ 8 ಸಾವಿರ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ಪಡೆದ ವಿಷ್ಣು ಬಳಗ ತಂಡಕ್ಕೆ 5 ಸಾವಿರ ರೂ.ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ತೃತೀಯ ಸ್ಥಾನ ಪಡೆದ ಓಂ ಪ್ಲಸ್ ಸ್ಟಾರ್ ಮಲರ್ ತಂಡವು 3 ಸಾವಿರ ರೂ. ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ಆದರ್ಶ ಕೆಡವು ತಂಡವು 2 ರೂ. ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.


ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕುಡಿಯಾಲ ತಂಡಕ್ಕೆ 5 ಸಾವಿರ ರೂ.ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಆದರ್ಶ ಕೆಡವು ತಂಡಕ್ಕೆ 2 ಸಾವಿರ ರೂ.ನಗದು ಹಾಗೂ ಟ್ರೋಫಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net