ಸೋರುವ ಶಾಲಾ ಕೊಠಡಿಗಳು: ಬಿಇಒ ನಂಜರಾಜ್‌ ಭೇಟಿ, ಪರಿಶೀಲನೆ

room, leakage, BEO, verification,
Published on

ನ್ಯಾಮತಿ: ಮಳೆಯಿಂದಾಗಿ ತಾಲೂಕಿನಾದ್ಯಂತ 7 ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಸೋರುತ್ತಿದ್ದು, ಮಕ್ಕಳಿಗೆ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಬಿಇಒ ಎಸ್.ಸಿ. ನಂಜರಾಜ್ ಭೇಟಿ ನೀಡಿ ಪರಿಶೀಲಿಸಿದರು.

ಎಚ್.ಪಿ.ಎಸ್. ಗಡೇಕಟ್ಟೆ, ಎಚ್.ಪಿ.ಎಸ್.ಕುಂಕುವಾ, ಜಿ.ಎಚ್.ಎಸ್.ಗೋವಿನಕೋವಿ, ಎಚ್.ಪಿ.ಎಸ್. ಚೀಲೂರು, ಎಚ್.ಪಿ.ಎಸ್. ಸುರಹೊನ್ನೆ, ಎಚ್.ಪಿ.ಎಸ್. ಚಿನ್ನಿಕಟ್ಟೆ, ಎಚ್.ಪಿ.ಎಸ್. ಸೂರಗೊಂಡನಕೊಪ್ಪ ಸೇರಿದಂತೆ 7 ಶಾಲೆಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿ ದುರಸ್ತಿ ಮಾಡಿಕೊಡುವ ಭರವಸೆ ನೀಡಿದರು.

ಅಲ್ಲಿವರೆಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನಾನುಕೂಲ ಆಗದಂತೆ ಪರ‌್ಯಾಯ ವ್ಯವಸ್ಥೆಯಡಿ ಕಲಿಕೆ ಮುಂದುವರಿಸುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಬಿ.ಆರ್.ಸಿ. ತಿಪ್ಪೇಶಪ್ಪ, ಇ.ಸಿ.ಒ. ಎಸ್.ಮುದ್ದೇನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net