

ರೋಣ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರೋಣ, ಹೊಳೆಆಲೂರ ಸಾಲಗಾರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಲ್ಲಪ್ಪ ಬಸವರಾಜ ಕೆಂಗಾರ ವಿರುದ್ಧ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಚ್ಚರಗೌಡ ವೆಂಕನಗೌಡ ಗೋವಿಂದಗೌಡ್ರ ಗೆಲುವು ಸಾಧಿಸಿದರು.
ಒಟ್ಟು 169 ಮತಗಳ ಇದ್ದು, ಆ ಪೈಕಿ 82 ಮತಗಳನ್ನು ಹುಲ್ಲಪ್ಪ ಕೆಂಗಾರ ಪಡೆದುಕೊಂಡರೆ, ಯಚ್ಚರಗೌಡ ಗೋವಿಂದಗೌಡ್ರ 87 ಮತ ಪಡೆದು ಗೆಲುವು ಸಾಧಿಸಿದರು. ನಿಡಗುಂದಿ ಸಾಲಗಾರರ ಕ್ಷೇತ್ರದಿಂದ ರಮೇಶ ಪಲ್ಲೇದ, ಹಿರೇಹಾಳ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಸನಗೌಡ ಕರಿಗೌಡರ, ಗಜೇಂದ್ರಗಡ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಈಶಪ್ಪ ರಾಥೋಡ, ಸೂಡಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಶೇಖರಪ್ಪ ಅಬ್ಬಿಗೇರಿ, ಮುಶಿಗೇರಿ ಸಾಲಗಾರರ ಹಿಂದುಳಿದ ಪ್ರವರ್ಗ ಬ ಕ್ಷೇತ್ರದಿಂದ ಶರಣಯ್ಯ ಮಾಸ್ತಿಗಟ್ಟಿ ಜಯಗಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ವಿ.ಆರ್. ಗುಡಿಸಾಗರ, ಪಿ.ಬಿ. ಅಳಗವಾಡಿ, ಬಸನಗೌಡ ಪೊಲೀಸ್ ಪಾಟೀಲ್, ನಿಂಗಪ್ಪ ಬದಾಮಿ,ಬಾಳಪ್ಪ ಖ್ಯಾಡ, ರಂಗನಗೌಡ ಪಾಟೀಲ, ಹೇಮಂತಗೌಡ ಬಾಲನಗೌಡ್ರ, ಮಾದೇನಗೌಡ ಭೀಮನಗೌಡ್ರ, ಮಹಾಗುಂಡಪ್ಪ ಭಾವಿ, ವೀರನಗೌಡ ಭೀಮನಗೌಡ್ರ, ವೆಂಕನಗೌಡ ಗೋವಿಂದಗೌಡ್ರ, ವೀರನಗೌಡ ಗಿಡ್ಡಮಣ್ಣವರ, ಶೇಖರಗೌಡ ಬಾಳನಗೌಡ್ರ, ಕುಬೇರಗೌಡ ಭೀಮನಗೌಡ್ರ, ಶಿವುಕುಮಾರ ಭಾವಿ, ರವಿ ವಡ್ಡರ ಇದ್ದರು.