ರೋಣ ಶಾಸಕ ಜಿ.ಎಸ್. ಪಾಟೀಲಗೆ ಸಚಿವ ಸ್ಥಾನದ ಬೇಡಿಕೆ

RON MLA G.S. patil minister
Published on

ನರೇಗಲ್ಲ: ರೋಣ ಮತ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ ಆಗ್ರಹಿಸಿದರು.


ಪಟ್ಟಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.


ಈ ಹಿಂದೆ ಶಾಸಕರಾಗಿದ್ದ ವೇಳೆ ಕ್ಷೇತ್ರದಲ್ಲಿ ಸಾವಿರ ಕೆರೆಗಳನ್ನು ನಿರ್ಮಿಸುವ ಮೂಲಕ ಅನ್ನದಾತರಿಗೆ ಅನುಕೂಲ ಮಾಡಿದ್ದಾರೆ. ಅಲ್ಲದೆ, ಎಲ್ಲ ಸಮುದಾಯದವರ ಪ್ರೀತಿಗೆ ಪಾತ್ರರಾಗಿದ್ದಾರೆ. ಹೀಗಾಗಿ, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.


ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿ, ಜಿ.ಎಸ್. ಪಾಟೀಲ ಅವರು ಅಭಿವೃದ್ಧಿ ಹರಿಕಾರರು, ಪರಿಸರ, ಶಿಕ್ಷಣ ಪ್ರೇಮಿಗಳು, ಉದ್ಯೋಗ ಸೃಷ್ಟಿಯ ಚಿಂತಕರಾಗಿದ್ದಾರೆ. ಮತಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿರುವ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲಾಭಕ್ಷಿ ನದಾಫ್, ನಿಂಗನಗೌಡ ಲಕ್ಕನಗೌಡ, ಶೇಖಪ್ಪ ಕಂಗಾರ, ಮುತ್ತಪ್ಪ ನೂಲ್ಕಿ, ಮೈಲಾರಪ್ಪ ಗೋಡಿ, ಶೇಖಪ್ಪ ಜುಟ್ಲ, ಬಾಳಪ್ಪ ಸೋಮಗೊಂಡ, ಕಳಕನಗೌಡ ಪೊಲೀಸ್ ಪಾಟೀಲ, ಆಸೀಫ್ ಹೊಸಮನಿ, ಸಂತೋಷ ಹನಮನಾಗದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net